ಮುದ್ದೇಬಿಹಾಳ :ಮೇ.27: ಕಳೇದ ಎಂಟು ತಿಂಗಳಿಂದ ಪಟ್ಟಣದ ಬನಶಂಕರಿ ವೃತ್ತದಿಂದ ಇಂದಿರಾ ವೃತ್ತದ ಮೂಲಕ ನಾಲತವಾಡ ಸಂಪರ್ಕಿಸುವ ರಸ್ತೆ ಕಾಮಗಾರಿ ಹಳ್ಳೂರ ಪೆಟ್ರೋಲ್ ಪಂಪ್‍ವರೆಗೆ ಪ್ರಾರಂಭಗೊಂಡಿದ್ದ ಈ ರಸ್ತೆ ಕಾಮಗಾರಿ ಇಲ್ಲಿತನಕವೂ ಪೂರ್ಣಗೊಳಿಸದೇ ಗುತ್ತಿಗೆದಾರರು ಸತಾಯಿಸುತ್ತಿದ್ದಾರೆ ಇದರಿಂದ ಈ ಭಾಗದ ಜನರಿಗೆ ತೀವೃ ತೊಂದರೆಯಾಗುತ್ತಿದೆ ಎನ್ನುವುದನ್ನ ಮನಗಂಡ ಪಟ್ಟಣದ ಮಹೆಬೂಬ ನಗರದ ನಿವಾಸಿಗಳು ಶುಕ್ರವಾರ ರಸ್ತೆ ತಡೆದು ದಿಢೀರ ಪ್ರತಿಭಟನೆ ನಡೆಸಿದರು.
ಈ ವೇ¼ ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದ ಪಿಎಸೈ ಆರೀಪ ಮುಶಾಪುರಿಯವರು ತಮ್ಮ ಪೋಲಿಸ್ ಸಿಬ್ಬಂದಿಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾದರೂ ಪ್ರತಿಭಟನಾಕಾರರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಹಾಗೂಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ರಸ್ತೆ ಕಾಮಗಾರಿ ಪ್ರಾರಂಭಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲ ಎಂದರು.
ಬಳಿಕ
ಪುರಸಭೆ ಸದಸ್ಯ ಮೈಹಿಬೂಬ ಗೊಳಸಂಗಿ ಹಾಗೂ ಮೈಹಿಬೂಬ ನಗರದ ನಿವಾಸಿ ಗುಲಾಮ ಧಪ್ಪೇದಾರವರು ಮಾತನಾಡಿ, ಕಳೇದ ಎಂಟು ತಿಂಗಳ ಹಿಂದೆ ಸಧ್ಯ ಪಟ್ಟಣದ ಬನಶಂಕರಿ ವೃತ್ತದಿಂದ ಇಂದಿರಾ ವೃತ್ತದ ಮೂಲಕ ನಾಲತವಾಡ ಸಂಪರ್ಕಿಸುವ ರಸ್ತೆ ಕಾಮಗಾರಿ ಹಳ್ಳೂರ ಪೆಟ್ರೋಲ್ ಪಂಪ್‍ವರೆಗೆ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದೆ ಆದರೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಗುತ್ತಿಗೆದಾರರು ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಜೊತೆಗೆ ಸಧ್ಯ ನಿರ್ಮಿಸಲಾದ ರಸ್ತೆ ಕಾಮಗಾರಿ ಚರಂಡಿಯೂ ಈ ಮೊದಲಿದ್ದ ಮೈಹಿಬೂಬ ನಗರದ ಬಡಾವಣೆಯ ರಸ್ತೆಗಳಿಗೆ ಹೊಂದಿಕೊಂಡಿರುವ ಚರಂಡಿಗಳಿಗಿಂತ ಎತ್ತರವಾಗಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.
ಇದರಿಂದ ಅಪೂರ್ಣ ರಸ್ತೆ ಕಾಮಗಾರಿಯಿಂದ ಜನರು ನಿತ್ಯ ಹಲವು ಬಗೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಆರು ತಿಂಗಳ ಹಿಂದೆ ಕಡಿಗಳನ್ನು ಬೇಕಾಬಿಟ್ಟಿ ರಸ್ತೆಯಲ್ಲಿ ಹಾಕಿ ಹೋದ ಗುತ್ತಿಗೆದಾರ ಈವರೆಗೂ ಕೆಲಸದ ಸ್ಥಳದಲ್ಲಿ ಬಂದಿರುವುದಿಲ್ಲ.ಮೆಟ್ಟಲಿಂಗ್ ಕೆಲಸ ಸರಿಯಾಗಿ ಮಾಡಿಲ್ಲ.ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಓಡಾಡಿದ ನಂತರ ಸಿಕ್ಕಾಪಟ್ಟೆ ಧೂಳು ಆವರಿಸಿ ಇಡೀ ಮಹೆಬೂಬ ನಗರದ ಈ ರಸ್ತೆಯ ಇಕ್ಕೆಲಗಳಲ್ಲಿ ಬರುವ ಮನೆಗಳಿಗೆ ಹೊಕ್ಕು ತುಂಬಾ ತೊಂದರೆ ಆಗಿದೆ ಜೊತೆಗೆ ಈ ರಸ್ತೆಯ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ಮನೆಗಳಲ್ಲಿರುವ ನಿವಾಸಿಗಳಲ್ಲಿ ಹಲವರು ಗರ್ಭಿಣಿಯರು, ಬಾಣಂತಿಯರು, ವೃದ್ಧರು,ಮಹಿಳೆಯರು,ಸಣ್ಣ ಸಣ್ಣ ಮಕ್ಕಳಿದ್ದು ಅವರಿಗೆಲ್ಲ ಉಸಿರಾಟದ ಸಮಸ್ಯೆ ಎದುರಿಸುವಂತಾಗಿದೆ.ಅಲ್ಲದೇ ಈ ರಸ್ತೆಯ ಕಾಮಗಾರಿಯ ಅಕ್ಕಪಕ್ಕದಲ್ಲಿ ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ಮಾಡಲಾಗಿದೆ.ಮಳೆ ಬಂದರೆ ನೀರು ಮನೆಗಳಲ್ಲಿ ಹೊಕ್ಕು ಮತ್ತಷ್ಟು ತೊಂದರೆ ಅನುಭವಿಸುವಂತಹ ವಾತಾವರಣ ನಿರ್ಮಾಣಗೊಂಸಡಿದೇ ಇದನ್ನು ಕೇಳಲು ಮುಂದಾದರೇ ಗುತ್ತಿಗೆದಾರರು ಪೋಲಿಸ್ ಅಸ್ತ್ರ ಬಳಸಿ ನಮ್ಮನ್ನೆಲ್ಲ ಹೋರಾಟ ಮಾಡದಂತೆ ಪ್ರಶ್ನೇ ಮಾಡದಂತೆ ಧರ್ಪದ ಮಾತುಗಳನ್ನಾಗಿ ಹಿಡಿತ ಸಾಧಿಸುತ್ತಾರೆ.
ಈ ಕುರಿತು ಕಳೇದ ವಾರದದ ಹಿಂದೇಯಷ್ಟೇ ಸಾಕಷ್ಟು ಬಾರಿ ಸಂಬಂಧಿಸಿದ ಪಿಡಬ್ಲ್ಯೂಡಿ ಇಲಾಖೆ,ತಹಸೀಲ್ದಾರ್,ಪುರಸಭೆ ಅಧಿಕಾರಿಗಳಿಗೆ ಲಿಖಿತ ಮನವಿ ಕೊಟ್ಟಿದ್ದರೂ ಯಾವುದಕ್ಕೂ ಸ್ಪಂದನೆ ದೊರೆತಿಲ್ಲ. ಕೆಲಸದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿ(ಬ್ಲಾಕ್ ಲಿಸ್ಟ್)ಗೆ ಸೇರಿಸಬೇಕು.ಇನ್ನುಳಿದ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಬೇಕು ಅಲ್ಲಿಯವರೆಗೂ ಈ ಪ್ರತಿಭಟನೆ ಕೈಬಿಡುವ ಪ್ರಶ್ನೇಯೇ ಇಲ್ಲ ಎಂದು ಪಟ್ಟು ಹಿಡಿದರು. ಹೋರಾಟಗಾರರ ಮಾತುಗಳನ್ನು ಆಲಿಸಿದ ಪಿಎಸೈ ಆರೀಫ್ ಮುಶಾಪುರಿಯವರು ಗುತ್ತಿಗೆದಾರರು ಊರಲ್ಲಿ ಇಲ್ಲದ ಕಾರಣ ಅವರ ಪರವಾಗಿ ಸಿಬ್ಬಂದಿಯೊಬ್ಬರನ್ನು ಕರೆದು ಅಫೂರ್ಣಗೊಂಡ ಕಾಮಗಾರಿ ಇಂದಿನಿಂದಲೆ ಪ್ರಾರಂಭಿಸಿ ಸೋಮವಾರದೊಳಗೆ ಮುಗಿಸಬೇಕು ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಸಧ್ಯಕ್ಕೆ ಹೋರಾಟ ಕೈಬಿಡಬೇಕು ಎಂದು ಪ್ರತಿಭಟನಾ ಕಾರ್ಯಕರ್ತರಿಗೆ ಮನೋಲಿಸಿ ಪ್ರತಿಭಟನೆ ಕೈಬಿಡುವಂತೆ ನೋಡಿಕೊಂಡರು ಇದರಿಂದ ಕೆಲ ಗಂಟೆಯವರೆಗೂ ವಾಹನಗಳ ನಿಂತು ರಸ್ತೆಯೂ ಸಂಪೂರ್ಣ ಟ್ರಾಫಿಕ್ ಹೆಚ್ಚಾಗಿ ತರರೊಂದರೆಅನುಭವಿಸುವಂತಾಯಿತು.
ಈ ವೇಳೆ ಪುರಸಭೆ ಸದಸ್ಯ ರಿಯಾಜಹಮ್ಮದ ಢವಳಗಿ, ಅಲ್ಲಾಭಕ್ಷ ಟಕ್ಕಳಕಿ, ಮಹಮ್ಮದ ನಾಗರಾಳ, ಯೂಸೂಫ್ ನಾಯ್ಕೋಡಿ, ಪ್ರಕಾಶ ಚಲವಾದಿ, ದಾವಲಸಾಬ ಗೊಳಸಂಗಿ, ತರಾಜು ಹೊನ್ನುಟಗಿ, ಮಾರುತಿ ಪವಾರ, ಯಾಶಿನ ದೇಸಾಯಿ, ಮಹಿಬೂಬ ಸಾತಿಹಾಳ ಸೇರಿದಂತೆ ನೂರಕ್ಕು ಹೆಚ್ಚುನ ಇದ್ದರು.