ರಸ್ತೆ ಕಾಮಗಾರಿ ಪರಿಶೀಲನೆ

ತಾಳಿಕೋಟೆ:ಮಾ.2: ಪಟ್ಟಣದ ವಾರ್ಡ ನಂ.3 ರಲ್ಲಿ ನಗರೋತ್ತಾನ ಹಂತ 4 ಪ್ಯಾಕೇಜ್ 2 ರಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ನಗರೋತ್ತಾನ ಯೋಜನಾ ಸಮಾಲೋಚಕರಾದ ಸದಾಶಿವ ಮನಗೂಳಿ ಅವರು ಮಂಗಳವಾರರಂದು ಪರಿಶೀಲನೆ ನಡೆಸಿದರು.

ನಗರೋತ್ತಾನ ಯೋಜನೆಯಡಿ ನಡೆಯುತ್ತಿರುವ ಈ ರಸ್ತೆ ಕಾಮಗಾರಿಯ ಜೊತೆಗೆ ಢಾಂಬರೀಕರಣ ಕಾಮಗಾರಿಯು ನಡೆಯಲಿದ್ದು ನಿತ್ಯ ಕೆಲಸ ನಡೆಯುವ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಲಾಗುತ್ತಿದೆ ಕಾಮಗಾರಿಯಲ್ಲಿ ಸದಾ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಗುತ್ತಿಗೆದಾರರಿಗೂ ಸೂಚನೆಯನ್ನು ನೀಡಿದ್ದೇವೆ ಅದೇ ರೀತಿಯ ಕೆಲವು ವಾರ್ಡಗಳ ಇಕ್ಕಲಗಳ ರಸ್ತೆಯಲ್ಲಿ ಟೈಲ್ಸ್‍ಜೋಡಿಸುವ ಕೆಲಸ ನಡೆದಿದೆ ಒಟ್ಟಾರೆ ಉತ್ತಮ ರೀತಿಯ ಕಾಮಗಾರಿ ನಡೆಯಲಿದೆ ಎಂದು ಪತ್ರಿಕೆಗೆ ಮಾಹಿತಿ ಒದಗಿಸಿದರು.

ಈ ಸಮಯದಲ್ಲಿ ಪುರಸಭೆ ಸದಸ್ಯರು, ವಾರ್ಡಿನ ಜನರು ಉಪಸ್ಥಿತರಿದ್ದರು.