ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಶಾಸಕ ಪಾಟೀಲ

ಹುಮನಾಬಾದ್:ಸೆ.13: ಚಿಟಗುಪ್ಪಾ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಕಳಪೆ ಕಂಡು ಬಂದರೆ ಶಿಸ್ತು ಕ್ರಮಗೊಳ್ಳಲಾಗುವುದು ಎಂದು ಮಾಜಿ ಸಚಿವರು ಹಾಲಿ ಶಾಸಕ ರಾಜಶೇಖರ್ ಪಾಟೀಲ ಸೂಚಿಸಿದರು.
ಚಿಟಗುಪ್ಪಾ ಪಟ್ಟಣದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ನೆಹರು ಚೌಕದಿಂದ ಭವಾನಿ ದೇವಸ್ಥಾನದ ವರೆಗೆ ನಿರ್ಮಾಣ ಮಾಡಲಾಗುತ್ತಿರುವ ರಸ್ತೆ, ಚರಂಡಿ, ಪೈಪಲೈನ ಹಾಗೂ ಎನ್‍ಜಿಓ ಕಾಲೊನಿಯ ಓವರ್ ಹೇಡ್ ಟ್ಯಾಂಕನ್ ನಿರ್ಮಾಣ ಕಾಮಗಾರಿಗೆ ಶನಿವಾರ ಭೋಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರೋತ್ಥಾನ ಯೋಜನೆಯ ಸುಮಾರು 7 ಕೋಟಿ ವೆಚ್ಚದಲ್ಲಿ ನೆಹರು ಚೌಕದಿಂದ ಭವಾನಿ ದೇವಸ್ಥಾನದ ವರೆಗೆ ರಸ್ತೆ, ಚರಂಡಿ, ಪೈಪಲೈನ್ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಇಲ್ಲಿನ ಎನ್‍ಜಿಓ ಕಾಲೊನಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 5 ಲಕ್ಷ ಲೀಟರ್ ಸಾಮಥ್ರ್ಯ ಮೇಲ್ಮಟ್ಟದ ಜಲ ಸಂಗ್ರಹಗಾರ ಹಾಗೂ ಪೀಡರ್ ಕೊಳವೆ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಪಟ್ಟಣದ ಜನತೆಗೆ ಹೆಚ್ಚಿನ ಅನುಕುಲವಾಗಲಿದೆ, ಎಂದರು.
ಅಭಿವೃದ್ದಿಗೆ ಎಲ್ಲರ ಸಹಾಯ, ಸಹಕಾರ ಬಹಳ ಅವಶ್ಯವಾಗಿದ್ದು, ಚಿಟಗುಪ್ಪಾ ಪಟ್ಟಣ ಸೇರಿದಂತೆ ಕ್ಷೇತ್ರದ ಅಭಿವೃದ್ದಿಗಾಗಿ ಈಗಾಗಲೇ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿ ಪಡಿಸಲಾಗಿದೆ. ಇನ್ನು ಹಂತ, ಹಂತವಾಗಿ ಸಮಗೃ ಅಭಿವೃದ್ದಿಗಾಗಿ ನಾನು ಬದ್ದನಾಗಿದ್ದೇನೆ ಎಂದರು.
ತಹಶೀಲ್ದಾರ್ ರವೀಂದ್ರ ದಾಮಾ, ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್ ಭುತಾಳೆ, ಉಪಾಧ್ಯಕ್ಷೆ ಸೌಭಾಗ್ಯವತಿ ಅಶೋಕ ಸ್ವಾಮಿ, ಪುರಸಭೆ ಸದಸ್ಯರಾದ ದಿಲೀಪಕುಮಾರ ಬಗದಲಕರ್, ನಸೀರ ಖಾನ, ಹಬೀಬ್, ರೇವಣಸಿಪ್ಪ ಭುತಾಳೆ, ವಿಶಾಲ, ನಸೀರಸಾಬ, ಬಾಬಾ, ಮುಜಾಫ್ರರ ಪಟೇಲ್, ಮುಖ್ಯಾಧಿಕಾರಿ ಹುಸಾಮೋದ್ದಿನ್ ಬಾಬಾ, ಗುತ್ತಿಗೆದಾರರಾದ ರಾಮಕೃಚ್ಣ, ಇಬ್ರಾಹೀಂ, ಶಿವಾನಂದ ಪಾಟೀಲ, ಪುರಸಭೆ ಸದಸ್ಯರಾದ ದಿಲೀಪಕುಮಾರ ಬಗದಲಕರ್, ನಸೀರ ಖಾನ, ಹಬೀಬ್, ರೇವಣಸಿಪ್ಪ ಭುತಾಳೆ, ವಿಶಾಲ, ನಸೀರಸಾಬ, ಬಾಬಾ, ಮುಜಾಫರ್ ಪಟೇಲ್, ಪ್ರಮುಖರಾದ ಶಾಮರಾವ್ ಭುತಾಳೆ, ಪ್ರವೀಣ ಮೈತ್ರಸ್ಕರ್, ಇದ್ದರು.