ರಸ್ತೆ ಕಾಮಗಾರಿಗೆ ಭೂಮಿಪೂಜೆ


ಹುಬ್ಬಳ್ಳಿ,ಎ.4:ಪ್ರತಿಯೊಂದು ಗ್ರಾಮದಲ್ಲಿ ರಸ್ತೆಗಳು ಹಾಗೂ ಮೂಲಭೂತ ಸೌಕರ್ಯವನ್ನು ನೀಡುವ ಮೂಲಕ ಗ್ರಾಮದ ವ್ಯವಸ್ಥೆಯನ್ನು ಅಂದವಾಗಿ ಇಟ್ಟುಕೊಳ್ಳಬಹುದು ಹಾಗೂ ಕಾಮಗಾರಿ ಚೆನ್ನಾಗಿದ್ದರೆ ಅಲ್ಲಿನ ಶಿಕ್ಷಣ ವ್ಯವಸ್ಥೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಲಘಟಗಿ ಮತಕ್ಷೇತ್ರಕ್ಕೆ 80ಲಕ್ಷಕ್ಕೂ ಹೆಚ್ಚು ಅನುಧಾನ ನೀಡಿರುತ್ತೇನೆ.ಅಲ್ಲದೆ ಈ ಬಾಗದ ಜನತೆಯ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಹಾಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅಭಿಪ್ರಾಯಪಟ್ಟರು.
ಕಲಘಟಗಿ ವಿಧಾನ ಸಭಾ ಕ್ಷೇತ್ರದ ಶೀಗಿಗಟ್ಟಿ ಗ್ರಾಮದಲ್ಲಿನ ತಾಂಡಾದ ಲಾಲಪ್ಪ ಲಮಾಣಿ ಇವರ ಮನೆಯಿಂದ ಪ್ರಕಾಶ ಲಮಾಣಿ ಇವರ ಮನೆಯ ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಯಾವುದೇ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಅದು ಬಹುಕಾಲ ಬಾಳಿಕೆ ಬರುತ್ತದೆ ಎಂದರು.
ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಎಮ್.ನಿಂಬಣ್ಣವರ, ತಾಲೂಕಾ ಪಂಚಾಯತ ಸದಸ್ಯರಾದ ಮಂಜುಳಾ ಲಮಾಣಿ, ವೀರಯ್ಯ ಸಿದ್ದಾಪೂರಮಠ ಹಾಗೂ ಊರಿನ ಹಿರಿಯರಾದ ಜಿನ್ನಪ್ಪ ಲಮಾಣಿ, ಸೋಮಲಪ್ಪ ಲಮಾಣಿ, ಯಶವಂತ ಲಮಾಣಿ, ವಜ್ರಕುಮಾರ ಮಾದನಭಾವಿ, ಅಶೋಕ ಲಮಾಣಿ, ಸಿ.ಬಿ.ಗೋಕುಲ, ಸುರೇಶ ಮಂಜರಗಿ, ಮುಂತಾದವರು ಉಪಸ್ಥಿತರಿದ್ದರು.