ರಸ್ತೆ ಕಾಮಗಾರಿಗೆ ಚಿದಾನಂದ ಸವದಿ ಭೂಮಿಪೂಜೆ

ಅಥಣಿ :ಮಾ.3: ತಾಲೂಕಿನ ಸತ್ತಿ ಗ್ರಾಮದ ಝೀರೊ ಪಾಯಿಂಟ್ ದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂಗಳ ವೆಚ್ಚದ ಸತ್ತಿ ಗ್ರಾಮದಿಂದ ಝಿರೋ ಪಾಯಿಂಟ್ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಬಿಜೆಪಿ ಯುವ ಮುಖಂಡ ಚಿದಾನಂದ ಲಕ್ಷ್ಮಣ ಸವದಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಭಿಯಂತರಗಳಾದ ಎ ಜೆ ಮುಲ್ಲಾ, ಗೌಡಪ್ಪ ಘೂಳಪ್ಪನವರ ಗುತ್ತಿಗೆದಾರರಾದ ಕೃಷ್ಣ ಇಟ್ನಾಳ ಹಾಗೂ ಸಾಜೀದ ಬಿರಾದಾರ, ಮುಖಂಡರಾದ ಜಡೇಪ್ಪಾ ಕುಂಬಾರ, ಶ್ರೀಶೈಲ ನಾಯಿಕ, ಶಿವರುದ್ರ ಘೂಳಪ್ಪನವರ, ಸೇರಿದಂತೆ ಇತರರು ಉಪಸ್ಥಿತರಿದ್ದರು