
ಬೈಲಹೊಂಗಲ,ಮಾ14: ಪಟ್ಟಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪುರಸಭೆ ಪ್ರಾಮಾಣಿಕ ವಾಗಿ ಪ್ರಯತ್ನಿಸುವುದಾಗಿ ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ ಹೇಳಿದರು.
ಪಟ್ಟಣದ ಪಾಟೀಲ ಗಲ್ಲಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ರಸ್ತೆ ಗಳು ಹದಗೆಟ್ಟ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದು ಕಂಡು ಬಂದಿದ್ದು, ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿ ದುರಸ್ಥಿಗೊಳ್ಳಬೇಕಿರುವ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬಹು ದಿನಗಳ ಬೇಡಿಕೆಯಲ್ಲಿರುವ ನಗರದ ಪ್ರಮುಖ ರಸ್ತೆಗಳ ದುರಸ್ತಿಗೆ ಪುರಸಭೆ ಬದ್ಧ ಎಂದು ತಿಳಿಸಿದರು.
ವೇದಮೂರ್ತಿ ಮಹಾoತಯ್ಯ ತೆಗ್ಗಿನಮಠ ಶಾಸ್ತ್ರೀಗಳು ಭೂಮಿಪೂಜೆಯನ್ನು ನೆರವೇರಿಸಿದರು.
ನಗರದ ಗನ್ಯರಾದ ಪಾಂಡಪ್ಪ ಇಂಚಲ, ಶಿವಪ್ಪ ಮತ್ತಿಕೊಪ್ಪ, ಶ್ರೀಕಾಂತ ಮತ್ತಿಕೊಪ್ಪ,ಸೋಮನಾಥ ಸೊಪ್ಪಿಮಠ, ಪುರಸಭೆ ಸದಸ್ಯೆ ಶ್ರೀಮತಿ ಪ್ರೇಮಾ ಇಂಚಲ,ರೈತ ಸಂಘದ ಮಹಿಳಾ ತಾಲೂಕು ಅಧ್ಯಕ್ಷೆ ಶ್ರೀಮತಿ ಮಂಜುಳಾ ಮಲ್ಲಾಪುರ ಸೇರಿದಂತೆ ನಗರದ ಮುಖಂಡರು ಉಪಸ್ಥಿತರಿದ್ದರು.