ರಸ್ತೆ ಕಾಮಗಾರಿಗೆ ಗೌರಿಕಟ್ಟೆಯ ಮಣ್ಣು ಬಳಕೆಗೆ ಮೂಡ್ನಾಕೂಡು ಗ್ರಾಮಸ್ಥರ ವಿರೋಧ

ಚಾಮರಾಜನಗರ, ಮಾ.06- ರಸ್ತೆ ಕಾಮಗಾರಿಗೆ ಗೌರಿಕಟ್ಟೆ ಮಣ್ಣು ತೆಗೆದುಕೊಳ್ಳುವ ಮೂಲಕ ಗುತ್ತಿಗೆದಾರರು ಪಂಚಾಯಿತಿಗೆ ಸರ್ಕಾgದÀ ರಾಜಧನವನ್ನು ವಂಚನೆ ಮಾಡುತ್ತಿದ್ದು, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಮಲೆಯೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಲಗಾಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರಿಬೇಗೂರು ಗುರುಸ್ವಾಮಿ ಹಾಗೂ ರೈತ ಸಂಘಟನೆಯ ಮುಖಂಡ ಮಾಡ್ನಾಕೂಡು ಮಹೇಶ್ ಮಾತನಾಡಿ, ಗೌರಿ ಕಟ್ಟೆ ಅಭಿವೃದ್ದಿ ಹಾಗೂ ಮುಡ್ನಾಕೂಡು- ಮಲೆಯೂರು ಮಾರ್ಗದ ರಸ್ತೆ ಡಾಂಬರೀಕಣ ಮಾಡುವ ನೆಪದಲ್ಲಿ ಅಧಿಕಾರಿಗಳು, ಗುತ್ತಿಗೆದಾರ ಹಾಗೂ ಸ್ಥಳೀಯ ಶಾಸಕರು ಕೋಟ್ಯಾಂತರ ಗುಳುಂ ಮಾಡುತ್ತಿದ್ದಾರೆ. ಕಟ್ಟೆ ಅಭಿವೃದ್ದಿ ನೆಪದಲ್ಲಿ ಮಣ್ಣು ತೆಗೆದು ರಸ್ತೆ ಹಾಕುವ ಮೂಲಕ ಸರ್ಕಾರದ ಬೋಗಸಕ್ಕೆ ಬರಬೇಕಾಗಿದ್ದ ರಾಜಧನವನ್ನು ವಂಚಿಸಲಾಗುತ್ತಿದೆ ಎಂದು ದೂರಿದರು.
ಈಗಾಗಲೇ ಗೌರಿಕಟ್ಟೆ ಅಭಿವೃದ್ದಿಗಾಗಿ 50 ಲಕ್ಷ ರೂ. ಅನುದಾನ ನೀಡಿ, ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯನ್ನು ಆಳ ಮಾಡುವ ನೆಪದಲ್ಲಿ 4 ಕೋಟಿಗೂ ಹೆಚ್ಚು ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಪಡಿಸಲಾಗುತ್ತಿದೆ. ಈ ಕಾಮಗಾರಿ ಗುತ್ತಿಗೆಯನ್ನು ಚನ್ನಪಟ್ಟಣದ ನಾರಾಯಣರೆಡ್ಡಿ ಪಡೆದುಕೊಂಡಿದ್ದಾರೆ.
ಈಗಾಗಲೇ ರಸ್ತೆಗೆ ಗ್ರಾವೆಲ್ ಹಾಕಲು ಅಂದಾಜು ಪಟ್ಟಿಯಲ್ಲಿ 12.50 ಲಕ್ಷರೂ.ಗಳನ್ನು ನಿಗಧಿಪಡಿಸಿಕೊಂಡಿದ್ದಾರೆ. ಈ ಹಣವನ್ನು ಪಂಚಾಯಿತಿಗೆ ಕಟ್ಟಿ ಗ್ರಾವೆಲ್ ಪಡೆದುಕೊಂಡರೆ ನಮ್ಮ ಗ್ರಾಮ ಅಭಿವೃದ್ದಿ ಯಾಗುತ್ತದೆ. ಆದರೆ, ಸ್ಥಳೀಯ ಶಾಸಕರು ಮೌಖಿಕವಾಗಿ ಸೂಚನೆ ನೀಡಿದರು ಎಂಬ ಕಾರಣಕ್ಕೆ ಮಲೆಯೂರು ಗ್ರಾ.ಪಂ. ಪಿಡಿಓ ಶೃತಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕಟ್ಟೆಯಲ್ಲಿ ಮಣ್ಣು ತೆಗೆಯಲು ಅವಕಾಶ ನೀಡಿದ್ದಾರೆ ಎಂದು ದೂರಿದರು.
ಪಂಚಾಯಿತಿ ಕೆರೆÉ ನಿರ್ವಹಣೆ ಮಾಡುವುದಷ್ಟೆ ಅಧಿಕಾರ ಇದೆ. ಸಣ್ಣ ನೀರಾವರಿ ಇಲಾಖೆಗೆ ವ್ಯಾಪ್ತಿಗೆ ಬರುವ ಈ ಕೆರೆಯಲ್ಲಿ ಗ್ರಾವೆಲ್‍ಗೆ ಮಣ್ಣು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಬೇಕಾಗಿರುವುದು ಜಿಲ್ಲಾಧಿಕಾರಿ. ಈ ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಓ ಅವರು ಸ್ಥಳ ಪರಿಶೀಲನೆ ಮಾಡಿ, ಏಕಾಏಕಿ ಯಾರ ಗಮನಕ್ಕೂ ತರದೇ ಮಣ್ಣು ತೆಗೆಯಲು ಜೆಸಿಬಿ ಬಿಟ್ಟಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದಕ್ಕೆ ಅನುಮತಿ ನೀಡಿರುವ ಪಿಡಿಓ ಅಮಾನತ್ತಾಗಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಮೂಡ್ನಾಕೂಡು ಮಹೇಶ್, ಮುಖಂಡರಾದ ಗಿರೀಶ್ ಪಟೇಲ್, ನಾಗೇಂದ್ರಪಟೇಲ್, ಚೇತನ್ ಪಟೇಲ್, ಇತರರು ಇದ್ದರು.