ರಸ್ತೆ ಕಾಮಗಾರಿಗೆ ಅಡಿಗಲ್ಲು

ಕಾಳಗಿ :ಜ.14: ತಾಲೂಕಿನ ಟೆಂಗಳಿ ಗ್ರಾಮದ ಹತ್ತಿರ 2022-2023 ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಮೈಕ್ರೋ ಯೋಜನೆ ಅಡಿಯಲ್ಲಿ ಆಂದ್ರಪ್ರದೇಶ ಪುಟಾಪಕ್ ಬೋಸಗಾ ರಸ್ತೆ ರಾಜ್ಯ ಹೆದ್ದಾರಿ -126 ಕಿ.ಮೀ 78.19 ರಿಂದ 80.00 ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಂದಾಜು ಮೊತ್ತ 120.00 ಲಕ್ಷಗಳು ಅಡಿಗಲ್ಲು ಸಮಾರಂಭವನ್ನು ಶಾಸಕರಾದ ಡಾ. ಅವಿನಾಶ ಜಾಧವ ಉದ್ಘಾಟಿಸಿದರು. ಪಿ.ಡಬ್ಲ್ಯೂ.ಡಿ.ಎ.ಇ.ಇ ಸಿದ್ರಾಮ ದಂಡಗುಲಕರ್, ಶರಣಪ್ಪ ತೇಲ್ಕೂರ, ವಿಜಯಕುಮಾರ ಚೆಂಗಟಾ, ಪ್ರಶಾಂತ ಕದಂ, ಮಹೇಬೂಬ ಪಟೇಲ, ಸಂತೋಷ ಪಾಟೀಲ, ಮಲ್ಲಿನಾಥ ಪಾಟೀಲ ಕಾಳಗಿ, ರಮೇಶ ಕಿಟ್ಟದ, ಮಂಜುನಾಥ ಬೇರಿನ್, ಆನಂದ ಕೇಶ್ವರ, ಶರಣು ಚಂದಾ ಸೇರಿದಂತೆ ಅನೇಕರಿದ್ದರು.