ರಸ್ತೆ ಕಾಮಗಾರಿಗಾಗಿ ಕರವೇ ಪ್ರತಿಭಟನೆ .

ಧಿಕ್ಕಾರ ಧಿಕ್ಕಾರ .. ಶಾಸಕರಿಗೆ ಧಿಕ್ಕಾರ…?
ಮುದಗಲ್.ಜ.೧೪-ಪಟ್ಟಣದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಈ ರಸ್ತೆ ಕಾಮಗಾರಿ ಟೆಂಡರ್ ಕರೆಯದೆ ಸುಳ್ಳು ಭರವಸೆ ನೀಡುತ್ತಿರುವ ಲಿಂಗಸೂಗೂರು ಶಾಸಕ ಡಿ.ಎಸ್ ಹೂಲಗೇರಿಗೆ
ಧಿಕ್ಕಾರ ಧಿಕ್ಕಾರ ಶಾಸಕರಿಗೆ ಧಿಕ್ಕಾರ ಎಂದು ಕೂಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದರು.
ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿಯ ರಸ್ತೆ ಪಟ್ಟಣದಲ್ಲಿ ಸಂಪೂರ್ಣ ಹಾಳಾಗಿದೆ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡಲು ಹರಸಹಾಸಪಡುವಂತ್ತಾಗಿದೆ ಪಟ್ಟಣದಲ್ಲಿ ರಸ್ತೆ ಅಗಲಿಕರಣಕ್ಕಾಗಿ ಎಡಕ್ಕೆ ಮತ್ತು ಬಲಕ್ಕೆ
೫೦-೫೦-ಅಡಿಯಲ್ಲಿ ಕಟ್ಟಡ ನೆಲಸಮ ಮಾಡಿ ಸುಮಾರು ೧೦ ವರ್ಷ ಕಳೆದಿವೆ ಈ ಚಿಕ್ಕ ರಸ್ತೆಯಲ್ಲಿ ಪ್ರತಿದಿನ ವಾಹನ ಸವಾರರು ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಗಿದೆ ಈ ಕೂಡಲೆ ಈ ರಸ್ತೆ ಕಾಮಗಾರಿಗೆ ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್ ಎ ನಯೀಮ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಉಪತಹಶೀಲ್ದಾರ ನಾಗರಾಜ ಮೂಲಕ ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಾದ ಎಸ್ ಎನ್ ಖಾದ್ರಿ ನಾಗರಾಜ ನಾಯಕ ಮಟ್ಟೂರು .ವಿರುಪಾಕ್ಷಿ ಹೂಗಾರ ಮಹಾಂತೇಶ ಚಟ್ಟರ ಅನೀಫ್ ಗ್ಯಾನಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದರು.