ರಸ್ತೆ ಕಳಪೆ, ನಗರಸಭೆಯಿಂದ ಹೋರಾಟ ಹೇಳಿಕೆಗೆ ಖಂಡನೆ

ಪೊಲೀಸ್ ಕಾಲೋನಿ ರಸ್ತೆ ಟೆಂಡರ್ ನಿಯಮದಂತೆ ಕೈಗೊಳ್ಳಲಾಗಿದೆ
ರಾಯಚೂರು.ನ.13- ನಗರದಲ್ಲಿ ರಸ್ತೆ ಕಾಮಗಾರಿ ಕಳಪೆಯಾಗಿದ್ದರೆ, ಈ ಕುರಿತು ತನಿಖೆಗೆ ನಾವು ಸಿದ್ಧ ಆದರೆ, ನಗರಸಭೆಯಿಂದ ಹೋರಾಟ ನಡೆಸುತ್ತೇವೆ ಎನ್ನುವ ಹೇಳಿಕೆ ಖಂಡಿಸುವುದಾಗಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ರವೀಂದ್ರ ಜಲ್ದಾರ್ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರು ಮತ್ತು ಮುಖಂಡರು ನಗರದ ವಾರ್ಡ್ ರಸ್ತೆ ಕಾಮಗಾರಿಗೆ ಭೇಟಿ ನೀಡಿ, ಪರಿಶೀಲಿಸಿದರು. ಪರಿಶೀಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಾಡಗಿರಿ ನರಸಿಂಹಲು ಅವರು ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀ‌ಡಿರುವುದು ಎಷ್ಟು ಸರಿಯೆಂದು ಪ್ರಶ್ನಿಸಿದ ಅವರು, ನಗರಸಭೆಯಲ್ಲಿ ಕಾಂಗ್ರೆಸ್ಸಿನೊಂದಿಗೆ ಬಿಜೆಪಿ, ಜಾದಳ ಮತ್ತು ಶಾಸಕರು, ಸಂಸದರು ಪ್ರತಿನಿಧಿಸುತ್ತಾರೆ.
ನಗರಸಭೆ ಉಪಾಧ್ಯಕ್ಷರಾಗಿ ಅವರೇ ಹೋರಾಟ ಮಾಡುತ್ತೇವೆ ಎನ್ನುವುದು ಆಕ್ಷೇಪಾರ್ಹವಾಗಿದೆ. ಇದನ್ನು ನಾನು ಖಂಡಿಸುವುದಾಗಿ ಹೇಳಿದ ಅವರು, ಯಾವುದೇ ಕಾಮಗಾರಿ ಬಗ್ಗೆ ವೀಕ್ಷಿಸುವ ಅಧಿಕಾರವಿದೆ. ಆದರೆ, ಕಾಮಗಾರಿ ಗುಣಮಟ್ಟ ಪರಿಶೀಲಿಸಿ, ಕಳಪೆ ಕಾಮಗಾರಿಯಾಗಿದ್ದರೇ, ಈ ಬಗ್ಗೆ ತನಿಖೆ ನಡೆಸಲಿ. ಇದಕ್ಕೆ ನಾವು ಬೆಂಬಲಿಸುತ್ತೇವೆಂದ ಅವರು, ಎಲ್‌ಬಿಎಸ್ ನಗರದಲ್ಲಿ ನಡೆದ ಕಾಮಗಾರಿ ಟೆಂಡರ್ ನಿಯಮಗಳನ್ವಯ ಕೈಗೊಳ್ಳಲಾಗಿದೆ. ಡ್ಯಾಡಿ ವೀರೇಶ ಗುತ್ತೇದಾರರು ಈ ಕಾಮಗಾರಿ ಕೈಗೊಂಡಿದ್ದು, ಇದರಲ್ಲಿ ಯಾವುದೇ ಕಳಪೆಯಾಗಿಲ್ಲ. ಮೂರನೇ ತಂಡದ ಪರಿಶೀಲನೆ ನಂತರವಷ್ಟೆ ಬಿಲ್ ಪಾವತಿಸುತ್ತಾರೆ ಎನ್ನುವುದು ಸಂಬಂಧಪಟ್ಟವರಿಗೆ ಮಾಹಿತಿ ಇರಬೇಕು.
ಎಲ್‌ಬಿಎಸ್ ನಗರ, ಪೊಲೀಸ್ ಕಾಲೋನಿ ಕಲ್ಯಾಣ ಮಂಟಪ ಮುಂಭಾಗದ ರಸ್ತೆ ಅವೈಜ್ಞಾನಿಕ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡು ಕಡೆ ಚರಂಡಿಗಳೊಂದಿಗೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಈ ರಸ್ತೆಗೆ ಮೀಸಲಿದ್ದ ನಿರ್ದಿಷ್ಟ ಅನುದಾನದಲ್ಲಿ ಎಷ್ಟು ಅನುದಾನ ಸಾಧ್ಯವೋ ಅಷ್ಟು ಕಾಮಗಾರಿ ಕೈಗೊಳ್ಳಲಾಗಿದೆ. ಉಳಿದ ಕಾಮಗಾರಿಗೆ ಅನುದಾನ ಬಿಡುಗಡೆಗೊಂಡ ನಂತರ ರಸ್ತೆ ಮತ್ತು ಚರಂಡಿ ಕಾಮಗಾರಿ ಮುಂದುವರೆಯಲಿದೆ.
ಮಳೆಯಿಂದ ತೀವ್ರ ಹಾನಿಗೆ ಗುರಿಯಾದ ಜನರಿಗೆ ರಾಜ್ಯ ಕಂದಾಯ ಇಲಾಖೆಯಿಂದ ತಲಾ 10 ಸಾವಿರ ರೂ. ಪರಿಹಾರ ಮಾಡಲಾಗಿದೆ. ಅತಿವೃಷ್ಟಿಯಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದ 3700 ಮನೆಗಳಿಗೆ ಪರಿಹಾರ ಒದಗಿಸಲಾಗಿದೆ. ಶಾಸಕರು ಈ ಅನುದಾನವನ್ನು ಬಿಡುಗಡೆಗೊಳ್ಳುವಂತೆ ಮಾಡಿದ್ದಾರೆ. ಈಗಾಗಲೇ ನಮ್ಮ ಬಡಾವಣೆಯಲ್ಲಿ ಅನೇಕರು ಆರ್‌ಟಿಜಿಎಸ್ ಮೂಲಕ ಅನುದಾನ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
ನಗರದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕಾಗಿ 350 ಕೋಟಿ ಯೋಜನೆಗೆ ರಾಜ್ಯ ರಸ್ತೆ ಅಭಿವೃದ್ಧಿ ಮಂಡಳಿಯಿಂದ ಅನುಮೋದನೆ ದೊರೆತಿದೆ. ಅಧ್ಯಕ್ಷ ಕೆ.ಶಿವನಗೌಡ ನಾಯಕ ಮತ್ತು ಶಾಸಕರು ಈ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ನಗರದಲ್ಲಿ ಮುಂಬರುವ ದಿನಗಳಲ್ಲಿ ರಿಂಗ್ ರಸ್ತೆ ಕೈಗೊಳ್ಳುವ ನಿರೀಕ್ಷೆ ಕೈಗೊಳ್ಳಲು ನೆರವಾಗಿದೆ.
ಈ ಸಂದರ್ಭದಲ್ಲಿ ಕಡಗೋಳ ಆಂಜಿನೇಯ್ಯ , ದೊಡ್ಡ ಮಲ್ಲೇಶ, ಈ.ಶಶಿರಾಜ, ಶರಣಬಸಪ್ಪ ಬಲ್ಲಟಗಿ ಉಪಸ್ಥಿತರಿದ್ದರು.