ರಸ್ತೆ ಒತ್ತುವರಿ ತೆರವಿಗೆ ಗ್ರಾಮಸ್ಥರ ಒತ್ತಾಯ

ಕೋಲಾರ,ಸೆ,೨೦:ತಾಲ್ಲೂಕಿನ ಹೊಲ್ಲಂಬಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ರಸ್ತೆಯನ್ನು ಒತ್ತುವರಿ ಮಾಡಿ ಕೊಂಡು ಮನೆ, ಮೆಟ್ಟಿಲು ಹಾಗೂ ಸಂಪುಗಳನ್ನು ನಿರ್ಮಿಸಿ ಕೊಂಡಿರುವ ಒತ್ತುವರಿದಾರರ ಶಾಂತಮ್ಮ ಕೋಂ ಬ್ಯಾಟಪ್ಪ ಅವರ ವಿರುದ್ದ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಪ್ರತಿಭಟಿಸಿ ಒತ್ತುವರಿಯನ್ನು ತೆರವು ಮಾಡಿಸಿ ಸಾರ್ವಜನಿಕರಿಗೆ ಅನುಕೊಲ ಮಾಡಿ ಸರ್ಕಾರದ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯ ಬೇಕೆಂದು ಒತ್ತಾಯಿಸಿದರು.
ಹೊಲ್ಲಂಬಳ್ಳಿ ಗ್ರಾಮದ ಆಸ್ತಿ ೬೩ಕ್ಕೆ ಸಂಬಂಧಿಸಿದಂತೆ ಶಾಂತಮ್ಮ ಕೋಂ ಬ್ಯಾಟಪ್ಪ ಎಂಬುವರಿಗೆ ಸೇರಿದ ಆಸ್ತಿ ಪೂರ್ವ, ಪಶ್ಚಿಮ ೨೮ ಅಡಿಗಳು ಮತ್ತು ಉತ್ತರ,ದಕ್ಷಿಣ ೩೪ ಅಡಿಗಳಿದ್ದು, ಪೂರ್ವಕ್ಕೆ ನಾರಾಯಣಪ್ಪ,ಪಶ್ಚಿಮಕ್ಕೆ ನಾರಾಯಣಮ್ಮನ ಮನೆ, ಮತ್ತು ಉತ್ತರಕ್ಕೆ ಸರ್ಕಾರಿ ರಸ್ತೆ, ದಕ್ಷಿಣಕ್ಕೆ ನಾರಾಯಣಮ್ಮ ಎಂಬುವರ ಆಸ್ತಿಗಳಿರುವ ಚಕ್ಕುಬಂಧಿಯಾಗಿದೆ.
ಅದರೆ ಉತ್ತರದ ಕಡೆ ರಸ್ತೆಯಲ್ಲಿ ಶಾಂತಮ್ಮ ಅವರು ಅಕ್ರಮವಾಗಿ ಒತ್ತುವರಿ ಮಾಡಿ ಕೊಂಡು ಮನೆ, ಮೆಟ್ಟಲು ಹಾಗೂ ಸಂಪುಗಳನ್ನು ನಿರ್ಮಿಸಿ ಕೊಂಡಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ ಅವರು ಇವುಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿಯಿಂದ ಯಾವೂದೇ ಪರವಾನಗಿ ಪಡೆದಿರುವುದಿಲ್ಲ.
ಅವರದೇ ನಿವೇಶದಲ್ಲಿ ದಕ್ಷಿಣ ಭಾಗದಲ್ಲಿ ೭.೫ ಅಡಿ ಉಳಿಕೆ ಜಾಗ ಇದ್ದರೂ ಸಹ ಉತ್ತರದಲ್ಲಿರುವ ಸರ್ಕಾರಿ ರಸ್ತೆಯಲ್ಲಿ ಸಂಪು, ಸ್ನಾನದ ಗೃಹ ಮತ್ತು ಮೆಟ್ಟಿಲುಗಳನ್ನು ನಿರ್ಮಿಸುವ ಮೂಲಕ ೩.೮ ಅಡಿಗಳು ಒತ್ತುವರಿ ಮಾಡಿ ಕೊಂಡಿದ್ದಾರೆ. ಇದರಿಂದ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡೆತಡೆಗಳು ಉಂಟಾಗಿದೆ.
ಅಕ್ರಮ ಒತ್ತುವರಿ ವಿರುದ್ದ ಗ್ರಾಮಾಸ್ಥರು ಶಾಂತಮ್ಮ ಕೋ ಬ್ಯಾಟಪ್ಪ ಅವರಿಗೆ ರಸ್ತೆ ಮಾಡುತ್ತಿರುವುದನ್ನು ಸಾಕಷ್ಟು ಬಾರಿ ವಿರೋಧ ವ್ಯಕ್ತ ಪಡೆಸಿದರೂ ಸಹ ಯಾವೂದಕ್ಕೂ ಮನ್ನಣೆ ನೀಡದೆ,ನಿರ್ಲಕ್ಷಿಸಿ ಕಾಮಗಾರಿಯನ್ನು ಮುಂದುವರೆಸಿರುವ ವಿರುದ್ದ ಪಂಚಾಯಿತಿಗೆ, ಪೊಲೀಸ್ ಠಾಣೆಗೆ ಹಾಗೂ ತಾಲ್ಲೂಕು ಪಂಚಾಯಿತಿಗೆ ದೂರಿದರೂ ಸಹ ತಮ್ಮ ಪ್ರಭಾವವನ್ನು ಬೀರಿ ಅಧಿಕಾರಿಗಳು ಯಾವೂದೇ ಕ್ರಮಕೈಗೊಳ್ಳದಂತೆ ಒತ್ತಡ ಹಾಕಿಸುತ್ತಿದ್ದರು.
ಪಂಚಾಯಿತಿ, ಪೊಲೀಸ್ ಠಾಣೆಗಳಲ್ಲಿ ಹಲವಾರು ಬಾರಿ ಪಂಚಾಯಿತಿಗಳು ನಡೆದು ತೀರ್ಮಾನಗಳು ನಡೆದಿದ್ದರೂ ಸಹ ಯಾವೂದಕ್ಕೂ ಮನ್ನಣೆ ನೀಡದ ಹಿನ್ನಲೆಯಲ್ಲಿ ಇಂದು ಗ್ರಾಮಾಸ್ಟರು ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟಿಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೊಡಲೇ ಒತ್ತುವರಿಯನ್ನು ತೆರುವು ಮಾಡ ಬೇಕು. ಇದರ ಖರ್ಚು, ವೆಚ್ಚಗಳನ್ನು ಒತ್ತುವರಿದಾರರಿಂದಲೇ ವಸೂಲಿ ಮಾಡುವ ಜೂತೆಗೆ ದಂಡವನ್ನು ವಿಧಿಸ ಬೇಕೆಂದು ತಾಲ್ಲೂಕು ಪಂಚಾಯಿತಿ ಇ.ಓ. ಅವರಿಗೆ ಆಗ್ರಹ ಪಡೆಸಿದರು.
ಪ್ರತಿಭಟನೆಯಲ್ಲಿ ಹೊಲ್ಲಂಬಳ್ಳಿ ಗ್ರಾಮ ಪಂಚಾಯಿತಿಯ ಚಲಪತಿ, ಬಿ.ವಿ.ಕೃಷ್ಣಪ್ಪ, ನರಸಿಂಹಯ್ಯ, ವೆಂಕಟೇಶಪ್ಪ ಸೀನಪ್ಪ, ತಿಪ್ಪಣ್ಣ, ನಾರಾಯಣಪ್ಪ, ಚನ್ನಮರಿಗೌಡ, ಮುನಿಯಪ್ಪ,ರಮೇಶ್ ಮುಂತಾದವರು ಭಾಗವಹಿಸಿದ್ದರು.