
ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ6. ಸಮೀಪದ ತೆಕ್ಕಲಕೋಟೆ ರಸ್ತೆಯನ್ನು ದುರಸ್ಥಿಗೊಳಿಸುವ ಕಾರ್ಯ ನಡೆಯುತ್ತಿದ್ದು, ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ. ಕಿಲೋಮೀಟರ್‍ಗಟ್ಟಲೇ ಉದ್ದಕ್ಕೂ ಬಿಂಚೆಯಲ್ಲಿ ಸಾಗುವುದು, ವಾಹನ ಸವಾರರಿಗೆ ದುಸ್ತರವಾಗಿದೆ. ದುರಸ್ಥಿ ಕಾರ್ಯದಲ್ಲಿ ಅಲ್ಲಲ್ಲಿ ಒಂದೊಂದು ರೀತಿಯಾಗಿ ಸುಮಾರು 2 ಕಿ.ಮೀ. ಉದ್ದಕ್ಕೂ ರಸ್ತೆಯನ್ನು ಅಗೆದು ರಸ್ತೆ ಮದ್ದೆ ಮಣ್ಣು ಒಡ್ಡು ಹಾಕಿರುವುದು. ಕಲ್ಲುಬಿಂಚೆಗಳ ರಾಶಿಯನ್ನು ಹಾಕಿರುವುದು, ಬಿಂಚೆಗಳನ್ನು ರಸ್ತೆಯುದ್ದಕ್ಕೂ ಹಾಕಿ ಅದರ ಮೇಲೆ ಪುಡಿ ಗ್ರಾವೆಲ್ ಅಥವಾ ಸಿಮೆಂಟ್ ಮಿಶ್ರಣದ ಬಿಂಚೆ ಪೌಡರ್ ಹಾಕದಿರುವುದು, ಒಂದು ಕಡೆ ಪೌಡರ್ ಹಾಕಿದ್ದರೂ ವಾಹನಗಳ ನಿರಂತರ ಒಡಾಟದಿಂದ ಬೆಂಚೆಗಳು ಎದ್ದಿರುವುದು. ಆಗಿರುವದರಿಂದ ಸುಮಾರು 4-5 ಕಿ.ಮೀ. ದುರಸ್ಥೀ ನಡೆಯುತ್ತಿರುವ ರಸ್ತೆಯಲ್ಲಿ ದಿನನಿತ್ಯ ಅಗತ್ಯ ಕೆಲಸಗಳಿಗೆ ತೆಕ್ಕಲಕೋಟೆಯಿಂದ, ಸಿರುಗುಪ್ಪದಿಂದ, ಸಿರಿಗೇರಿಯಿಂದ ಇತರೆ ಸಂಪರ್ಕದ ಗ್ರಾಮಗಳಿಂದ ಹೋಗುವ ಬರವವರಿಗೆ ತ್ರಾಸದಾಯಕವಾಗಿ ಗಾಡಿಗಳಲ್ಲಿ ಸಾಗುವವರು ಬೀಳುವುದು ಏಳುವುದು ಸಣ್ಣಪುಟ್ಟ ಗಾಯ ಮಾಡಿಕೊಳ್ಳುವ ಘಟನೆಗಳು ನಡೆಯಲು ಕಾರಣವಾಗುತ್ತಿದೆ. ರಸ್ತೆ ದುರಸ್ಥೀ ಕೆಲಸವು ಸಮರ್ಪಕವಾಗಿ ನಡೆಸಬೇಕೆಂದು, ವಾಹನ ಸವಾರರ ಸಂಚಾರವನ್ನೂ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಬೇಕೆಂಬುದು ಈ ರಸ್ತೆಯಲ್ಲಿ ನಿತ್ಯ ಸಾಗುವವರ ಆಗ್ರಹವಾಗಿದೆ.