ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ

ಲಕ್ಷ್ಮೇಶ್ವರ, ಸೆ 4: ತಾಲೂಕಿನ ಲಕ್ಷ್ಮೇಶ್ವರ ನೆಲೋಗಲ್ ಮಧ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ಹರದಗಟ್ಟಿ ಗ್ರಾಮದ ರಸ್ತೆ ಸುಧಾರಣೆಗೆ ಶಾಸಕ ರಾಮಣ್ಣ ಲಮಾಣಿ ಅವರು ಭೂಮಿ ಪೂಜೆ ನೆರವೇರಿಸಿದರು.
ಅಂದಾಜು 3.50 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದ್ದು ಅನೇಕ ದಿನಗಳಿಂದ ಈ ರಸ್ತೆ ಸಂಪೂರ್ಣ ಹದಿಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಅವರು ಬಿಡುಗಡೆ ಮಾಡಿಸಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಸರ್ಕಾರದ ಲೋಕೋಪಯೋಗಿ ಇಲಾಖೆ ಅನುದಾನ ನೀಡಿದ್ದು ಸಾರ್ವಜನಿಕರು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಸಾರ್ವಜನಿಕರ ಸಹಭಾಗಿತ್ವದಿಂದ ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅಡರಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಪ್ಯಾಟಿಯವರು ಮಾತನಾಡಿ ಅನೇಕ ದಿನಗಳಿಂದ ಈ ರಸ್ತೆ ದುರಸ್ತಿಗೆ ಹರದಗಟ್ಟಿ ಗ್ರಾಮದ ಜನರು ಶಾಸಕರನ್ನು ಒತ್ತಾಯಿಸುತ್ತಿದ್ದರು. ಈಗ ಶಾಸಕರ ಸತತ ಪ್ರಯತ್ನದಿಂದಾಗಿ ಅನುದಾನ ಬಿಡುಗಡೆಯಾಗಿದ್ದು ಗುಣಮಟ್ಟದ ರಸ್ತೆಗೆ ಎಲ್ಲರೂ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಫಕೀರಪ್ಪ ಮಾಳಗಿಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾವರೆಪ್ಪ ಲಮಾಣಿ, ಗೋವಿಂದಪ್ಪ ತಳವಾರ್, ಸೋಮಣ್ಣ ಲಮಾಣಿ, ಮಾನಪ್ಪ ಲಮಾಣಿ, ಹಾಲಪ್ಪ ಸುರುಣಗಿ, ಪ್ರಕಾಶ್ ಶಿರಹಟ್ಟಿ, ಶಿವಪ್ಪ ಲಮಾಣಿ, ಚಂದ್ರಕಾಂತ್ ಲಮಾಣಿ, ಸಂಗಪ್ಪ ಲಮಾಣಿ, ಶಂಕರಪ್ಪ ರಾಥೋಡ್, ಯುವ ಮುಖಂಡ ಲಕ್ಷ್ಮಣ್ ಲಮಾಣಿ, ಶಂಕರ ಕಾರ್ಬಾರಿ, ರಮೇಶ್ ಕೊಂಡಿಕೊಪ್ಪ ಸೇರಿದಂತೆ ಅನೇಕರಿದ್ದರು. ಪರಮೇಶ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.