ರಸ್ತೆ ಅಪಘಾತ ಬೆಳಗಾವಿ ಯೋಧ ದುರ್ಮರಣ

ಚಿಕ್ಕೋಡಿ, ಜು.19- ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ಬಿಎಸ್ಎಫ್ ಯೋಧರೊಬ್ಬರು ಪಶ್ಚಿಮ ಬಂಗಾಳದ ಪಂಜಿಪಾಡದಲ್ಲಿ ಸಾವಿಗೀಡಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ನಿವಾಸಿ ಸೂರಜ್ (32) ಮೃತ ಭಾರತೀಯ ಸೇನೆಯ ಯೋಧರಾಗಿದ್ದಾರೆ.
ಯೋಧ ಪಶ್ಚಿಮ ಬಂಗಾಳದಲ್ಲಿ ಗಡಿಭದ್ರತಾ ಪಡೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನಿನ್ನೆ ಬೆಳಗ್ಗೆ ಪತ್ನಿಯೊಂದಿಗೆ ಸೇವಾ ಸ್ಥಳಕ್ಕೆ ಹೋಗುತ್ತಿದ್ದಾಗ ರಿಕ್ಷಾದಿಂದ ಕೆಳಗಿಳಿಯುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಯೋಧ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.ಯೋಧ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಪ್ರಾಥಮಿಕ ‌ಮತ್ತು ಫ್ರೌಢ ಶಿಕ್ಷಣವನ್ನು ‌ಮುಗಿಸಿದ್ದರು. 2012ರಲ್ಲಿ ಭಾರತೀಯ‌ ಸೇನೆ ಬಿಎಸ್ಎಫ್ ಸೇನೆಗೆ ಸೇರ್ಪಡೆಗೊಂಡಿದ್ದರು. ‌ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಯಡೂರವಾಡಿ ಗ್ರಾಮದಲ್ಲಿ ನೀರವಮೌನ ಆವರಿಸಿದೆ.