ರಸ್ತೆ ಅಪಘಾತ: ಪತಿ-ಪತ್ನಿ ಸಾವು

ಕಲಬುರಗಿ,ಸೆ.21-ಮಹೇಂದ್ರ ಮ್ಯಾಕ್ಸ್ ಪಿಕಪ್ ಗ್ಯಾಸ್ ಸಿಲಿಂಡರ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಮೇಲೆ ಹೊರಟಿದ್ದ ಪತಿ-ಪತ್ನಿ ಮೃvಪಟ್ಟ ಘಟನೆ ಸೇಡಂ ತಾಲ್ಲೂಕಿನ ಕುರಕುಂಟಾ ಗ್ರಾಮದ ಟಿ ಕ್ರಾಸ್ ಬಳಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಕುರಕುಂಟಾ ಗ್ರಾಮದ ಶೇಕ್ ಸಲಿಂ (42) ಮತ್ತು ಅವರ ಪತ್ನಿ ರೈಜಾ ಬೇಗಂ (40) ಎಂದು ಗುರುತಿಸಲಾಗಿದೆ.
ಪತಿ-ಪತ್ನಿ ಕುರಕುಂಟಾ ಗ್ರಾಮದಿಂದ ಸೇಡಂಗೆ ಹೊರಟಿದ್ದರು ಎಂದು ತಿಳಿದುಬಂದಿದೆ. ಬೈಕ್‍ಗೆ ಗ್ಯಾಸ್ ಸಿಲಿಂಡರ್ ಸರಬರಾಜು ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.