ರಸ್ತೆ ಅಪಘಾತ : ದಂಪತಿಗಳ ಸಾವು

ಕೊಟ್ಟೂರು, ಡಿ.4: ಬೈಕ್ ಅಜಾಗರುಕತೆಯಿಂದ ಸವಾರಿಮಾಡಿದ ಪರಿಣಾಮ ಎತ್ತಿನ ಗಾಡಿಗೆ ಗುದ್ದಿ ಬೈಕ್ ನಲ್ಲಿ ಸವಾರಿಮಾಡುತ್ತಿದ್ದ ದಂಪತಿಗಳಿಬ್ಬರು ಸ್ಥಳದಲ್ಲಿ ಮೃತಪಟ್ಟಘಟನೆ ಇಂದು ಬೆಳಗಿನ ಜಾವ 6ಗಂಟೆಗೆ ತಾಲೂಕಿನ ಬೆನಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಶ್ವೇತ ಹಾಗೂ ಕೆ.ಶಿವಕುಮಾರ ಮೃತ ದುರ್ದೈವಿಗಳು, ಜಗಳೂರು ತಾಲೂಕಿನ ಹೊಸಕೇರಿಯಿಂದ ಸ್ವಗ್ರಾಮ ಸಂಡೂರು ಪಟ್ಟಣಕ್ಕೆ ತೆರಳುವಾಗ ಈ ಘಟನೆ ನಡೆದಿದ್ದು ಘಾಟನಾ ಸ್ಥಳಕ್ಕೆ ಕೊಟ್ಟೂರು ಸಿಪಿಐ ದೊಡ್ಡಣ್ಣ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.108ಅಂಬಲೇನ್ಸ್ ಸಿಬ್ಬಂದಿ ರಮೇಶ ಹಾಗೂ ಕೊಟ್ರೇಶ, ಉಜ್ಜಿನಿ ಉಪ ಠಾಣೆಯ ಪೊಲೀಸ್ ಸಿಬ್ಬಂದಿ ಗಂಗಾಧರ ಇದ್ದರು.