ರಸ್ತೆ ಅಪಘಾತ: ಗರ್ಭಿಣಿ, ಮಗು ಸಾವು

ವಿಜಯಪುರ:ಡಿ.10:ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿದ್ದ 108 ಅಂಬುಲೆನ್ಸ್ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಹಾಗೂ ಹೊಟ್ಟೆಯಲ್ಲಿನ ಮಗು ಸಾವನಪ್ಪಿದ ದಾರುಣ ಘಟನೆ ತಾಳಿಕೋಟೆ ಬಳಿ ಸಂಭವಿಸಿದೆ.

ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದ ಭಾಗ್ಯಶ್ರೀ ರಾವುತಪ್ಪ ಪಾರಣ್ಣನವರ (19) ಹಾಗೂ ಹೊಟ್ಟೆಯಲ್ಲಿನ ಮಗು ಸಾವನಪ್ಪಿದೆ.

ಮೊದಲ ಹೆರಿಗೆಗಾಗಿ ತವರು ಮನೆ ನಾವದಗಿಗೆ ತೆರಳಿದ್ದ ಭಾಗ್ಯಶ್ರೀ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಬಂದಿದ್ದಳು.

ಭಾಗ್ಯಶ್ರೀ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಅಂಬುಲೆನ್ಸನಲ್ಲಿ ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಅಂಬುಲೆನ್ಸ ಡಿಕ್ಕಿಯಾಗಿ ತಾಂಯಿ ಹಾಗೂ ಗರ್ಭಾವಸ್ತೆಯಲ್ಲಿದ್ದ ಮಗು ಸತ್ತಿದೆ.

ಈ ಘಟನೆಯಿಂದಾಗಿ ಭಾಗ್ಯಶ್ರೀ ಪೋಷಕರು ಆಕ್ರೋಶ ಭರಿತರಾಗಿ ಅಂಬುಲೆನ್ಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ, ಆಂಬುಲೆನ್ಸ್ ನಲ್ಲಿದ್ದ ಇಬ್ಬರು ಸ್ಟಾಪ್ ನರ್ಸ ಹಾಗೂ ಓರ್ವ ಸಹಾಯಕ ಗಾಯಗೊಂಡಿದ್ದಾರೆ. ಆಲ್ಲದೆ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುಗ್ಗಿ ದಾಂಧಲೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆಯೂ ವೈದ್ಯ ಹುಕ್ಕೇರಿ ಹಾಗೂ ಇತರ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ವೈದ್ಯರು ಹಾಗೂ ಶುಶ್ರೂಷಕರು ಹಲ್ಲೆ ಖಂಡಿಸಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದರು. ಆಗ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ಮೃತಳ ಪೋಷಕರು ಹಾಗೂ ವೈದ್ಯ ಸಿಬ್ಬಂದಿ ಪ್ರತಿಭಟನೆ ಕೈ ಬಿಟ್ಟರು. ತಾಳಿಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.