ರಸ್ತೆ ಅಪಘಾತ: ಗಂಭೀರ ಗಾಯಗೊಡಿದ್ದ ವ್ಯಕ್ತಿ ಮೃತ್ಯು

ಬೆಳ್ತಂಗಡಿ, ಎ.2೬- ಲಾಯಿಲದಲ್ಲಿ ಹದಿನೈದು ದಿನಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಲಾಯಿಲ ನಿವಾಸಿ ಪ್ರಮೋದ್ ಭೈರ (38) ಎಂದು ಗುರುತಿಸಲಾಗಿದೆ. ಪುತ್ರಬೈಲು ಸಮೀಪ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಎಪ್ರಿಲ್ 9ರಂದು ನಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಪ್ರಮೋದ್ ಬೈರ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಮೋದ್ ಬೈರ ಬೆಳ್ತಂಗಡಿ ಎಪಿಎಂಸಿ ಸದಸ್ಯರಾದ ಈಶ್ವರ ಬೈರ ಅವರ ಪುತ್ರರಾಗಿದ್ದಾರೆ.