ರಸ್ತೆ ಅಪಘಾತ; ಓರ್ವನ ಸಾವು

ಹುಮನಾಬಾದ್ : ಡಿ.10:ಹಿಂಬದಿಯಿಂದ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಮನಾಬಾದ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಈ ಘಟನೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲ್‍ಪೂರ್ ತಾಲೂಕಿನ ಔರಾದ ಗ್ರಾಮದ ನಿವಾಸಿ ಮಲ್ಲಯ್ಯ ವೀರಯ್ಯಸ್ವಾಮಿ (35) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ಗಾಯವಾದ ವ್ಯಕ್ತಿ ರಮೇಶ ದತ್ತು ಮಹಗಾಂವಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಒಂದೇ ಗ್ರಾಮದವರಾದ ಇವರು ಹುಮನಾಬಾದ್ ಪಟ್ಟಣದಲ್ಲಿರುವ ಸ್ನೇತರನ್ನು ಭೇಟಿ ಮಾಡಿಕೊಂಡು ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಪಟ್ಟಣದ ಮಾಜಿ ಸಚಿವ ದಿ. ಬಸಬರಾಜ ಪಾಟೀಲ್ ವೃತ್ತದ ಹತ್ತಿರದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟದ್ದಾನೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಹುಮನಾಬಾದ್ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.