ರಸ್ತೆ ಅಪಘಾತ – ಇಬ್ಬರಿಗೆ ಗಾಯ

ರಾಯಚೂರು.ಆ.25- ನಗರದ ಮಂತ್ರಾಲಯ ರಸ್ತೆಯ ಮಲಿಯಾಬಾದ್ ಕ್ರಾಸ್ ಬಳಿ ಆಟೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಿಂದ ಮೂವರಿಗೆ ಗಾಯಗಳಾದ ಘಟನೆ ನಡೆದಿದೆ.
ಬೈಕ್ ಮತ್ತು ಆಟೋ ಚಾಲಕರಿಗೆ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಆಟೋ ರಸ್ತೆ ಪಕ್ಕದ ಹೊಲವೊಂದರಲ್ಲಿ ಬಿದ್ದಿದ್ದರೇ, ಬೈಕ್ ಸಹ ಪಕ್ಕದ ಹೊಲದಲ್ಲಿ ಬಿದ್ದಿದೆ. ಒಟ್ಟು ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಓರ್ವ ಯುವಕನ ಕಾಲು ಮುರಿದು ಮೂಳೆ ಹೊರ ಬಂದಿದ್ದರೇ, ಮತ್ತೊಬ್ಬ ಆಟೋ ಪಕ್ಕದಲ್ಲಿ ಗಂಭೀರ ರಕ್ತ ಗಾಯಗಳೊಂದಿಗೆ ನರಳಾಡುತ್ತಿದ್ದನು.