ರಸ್ತೆ ಅಪಘಾತ:ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಹೋಂಗಾರ್ಡ್

ಹುಮನಾಬಾದ:ನ.20:ಇಲ್ಲಿನ ಚೆಕ್ ಪೋಸ್ಟ್ ಹತ್ತಿರ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದ್ವೀಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಹೋಂಗಾರ್ಡ್ ಗಂಭೀರ ಗಾಯವಾಗಿದ್ದು, ಈತನ ಹೆಚ್ಚಿನ ಚಿಕಿತ್ಸೆಗೆ ಕಲ್ಬುರ್ಗಿ ಯುನಿಟೇಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಶಿವಕುಮಾರ ರಾಚಯ್ಯ ಸ್ವಾಮಿ ಸಾ.ಹಣಸನಾಳ ತಾ. ಹುಮನಾಬಾದ ಈತನೆ ಅಪಘಾತಕ್ಕೆ ಕೀಡಾದ ದುರ್ದೈವಿ. ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದು, ವೈದ್ಯಕೀಯ ವೆಚ್ಚ ಭರಿಸದೇ ಇವರ ಕುಟುಂಬ ಪರದಾಡುತ್ತಿದೆ. ಈ ಸಂಬಂಧ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.