ರಸ್ತೆ ಅಪಘಾತ:ಯುವಕ ಸಾವು


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಡಿ.27 ತಾಲೂಕಿನ ಬೆಣಕಲ್ಲು  ಮತ್ತು ಕೋಗಳಿ ತಾಂಡ ರಸ್ತೆ ಮಾರ್ಗದಲ್ಲಿ ಬುಧವಾರ ಅಪರಿಚಿತ ಸರಕು ಸಾಗಾಣಿಕೆಯ ವಾಹನ ಒಂದು ಬೈಕಿಗೆ ಡಿಕ್ಕಿಯಾಗಿದ್ದು. ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರಿಯಲ್ಲಿದ್ದ ಯುವತಿಗೆ ಗಂಭೀರ ಗಾಯವಾಗಿದೆ.
 ಪಟ್ಟಣದ ಎಂಬಿ ಕಾಲೋನಿಯ ಕೋಟೆಪ್ಪ( 25) ಮೃತಪಟ್ಟ ವ್ಯಕ್ತಿಯಾಗಿದ್ದು. ಹಿಂಬದಿಯಲ್ಲಿ ಕುಳಿತಿದ್ದ ತಾಲೂಕಿನ ಮಾಲವಿ ಗ್ರಾಮದ  ಜ್ಯೋತಿಯ ಬಲಗೈ ತುಂಡಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ದಾಖಲಾಗಿದೆ. ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿ ಹೊಡೆದ ಆಪರಿಚಿತ ವಾಹನ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

One attachment • Scanned by Gmail