ರಸ್ತೆ ಅಪಘಾತದ ನಂತರ ನಟಿ ಮಹಿಮಾ ಚೌಧರಿಗೆ ಮುಖದ ಸೌಂದರ್ಯ ಕಡಿಮೆ ಆಯ್ತು ಎಂಬ ದುಃಖ

ಬಾಲಿವುಡ್ ನಟಿ ಮಹಿಮಾ ಚೌಧರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ .ಅವರು ಒಂದು ಸಂದರ್ಶನದಲ್ಲಿ ತಾನು ರಸ್ತೆ ಅಪಘಾತದ ನಂತರ ಬದುಕಿನಲ್ಲಿ ಎದುರಿಸಿದ ಸಂಕಷ್ಟವನ್ನು ತೆರೆದಿಟ್ಟಿದ್ದಾರೆ. ಫಿಲ್ಮ್ ’ದಿಲ್ ಕ್ಯಾ ಕರೇ’ ಇದರ ಶೂಟಿಂಗ್ ನ ಕೊನೆಯ ದಿನ ಲೊಕೇಶನ್ ಗೆ ತೆರಳುತ್ತಿದ್ದರಂತೆ.ಆವಾಗ ಅವರ ಕಾರು ಹಾಲು ಸಾಗಾಟದ ಲಾರಿಗೆ ಡಿಕ್ಕಿ ಹೊಡೆಯಿತು.


ಈ ಅಪಘಾತದ ನಂತರ ಮಹಿಮಾ ಚೌಧರಿಯವರ ಮೂಳೆ ಏನೂ ಮುರಿಯದಿದ್ದರೂ ಇವರ ಮುಖದ ಮೇಲೆ ತುಂಬಾ ಗಾಯಗಳಾಗಿತ್ತು. ಹೇಗೆಂದರೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಗಾಜಿನ ಚೂರುಗಳು ಇವರ ಮುಖದ ತುಂಬ ಗೀರು ಹಾಕಿ ರಕ್ತ ಬರಿಸಿತಂತೆ. ನಂತರ ಅವರು ತುಂಬಾ ಕಷ್ಟಪಟ್ಟರು. ತನ್ನ ಮುಖದ ಚಹರೆ ಕೆಟ್ಟದಾಗಿ ಕಾಣುತ್ತಿದ್ದುದರಿಂದ ಅವರಿಗೆ ತುಂಬಾ ಬೇಸರವಾಗಿತ್ತು.ಅನಂತರ ಅವರ ಫಿಲ್ಮೀ ಕೆರಿಯರ್ ಕೂಡಾ ಮೂಲೆಗುಂಪಾಗುತ್ತಾ ಬಂತು.


ಹಾಗೆ ನೋಡಿದರೆ ಕೇವಲ ಮಹಿಮಾ ಚೌಧರಿ ಮಾತ್ರ ಅಲ್ಲ ಬಾಲಿವುಡ್ ನಲ್ಲಿ ಅಪಘಾತದ ನಂತರ ಇನ್ನೂ ಕೆಲವು ನಟಿಯರು ಸಂಕಷ್ಟಕ್ಕೆ ಬಿದ್ದದ್ದಿದೆ.
ಅವರಲ್ಲೊಬ್ಬರು ನಟಿ ಅನು ಅಗ್ರವಾಲ್.
ಆಶಿಕೀ ಗರ್ಲ್ ಹೆಸರಲ್ಲಿ ಪ್ರಖ್ಯಾತರಾದ ಅನು ಅಗ್ರವಾಲ್ ರಸ್ತೆ ಅಪಘಾತದ ನಂತರ ಕೆಲವು ಸಮಯ ತಮ್ಮ ನೆನಪುಗಳನ್ನೇ ಕಳಕೊಂಡರು. ನಾಲ್ಕು ವರ್ಷಗಳ ಶುಶ್ರೂಷೆಯ ನಂತರ ಅನು ಅಗ್ರವಾಲ್ ಅವರ ಆರೋಗ್ಯ ಸುಧಾರಿಸಿತು. ನಂತರ ಅವರು ಯೋಗದ ಸಹಾಯವನ್ನು ಪಡೆದರು. ಜೋಪಡಿಗಳಿಗೆ ತೆರಳಿ ಜೋಪಡಿ ಮಕ್ಕಳಿಗೆ ಯೋಗವನ್ನು ಕಲಿಸಲು ಶುರುಮಾಡಿದರು.


ನಟಿ ಶಬನಾ ಅಜ್ಮಿ ಕೂಡ ಒಮ್ಮೆ ಅಪಘಾತಕ್ಕೆ ಸಿಲುಕಿದ್ದರು. ೧೯ ಜನವರಿ ೨೦೨೦ರಂದು ರಸ್ತೆ ಅಪಘಾತದಲ್ಲಿ ಅವರು ಗಾಯಗೊಂಡರು. ಮುಂಬೈ ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಅವರ ಕಾರು ಒಂದು ಲಾರಿಗೆ ಸೈಡಿನಿಂದ ಡಿಕ್ಕಿ ಹೊಡೆಯಿತು.ಈ ಅಪಘಾತದಲ್ಲಿ ಶಬನಾ ಅಜ್ಮಿ ಅವರ ತಲೆ ಮತ್ತು ಕೈಗೆ ಪೆಟ್ಟಾಯಿತು. ಜಾವೇದ್ ಅಖ್ತರ್ ಕೂಡ ಕಾರಲ್ಲಿ ಇದ್ದರು. ಅವರಿಗೇನು ಗಾಯ ಆಗಿರಲಿಲ್ಲ. ನಂತರ ಶಬನಾ ಅಜ್ಮಿಯನ್ನು ನವಿಮುಂಬೈಯ ಎಂಜಿಎಂ ಹಾಸ್ಪಿಟಲ್ ಗೆ ಸೇರಿಸಲಾಯಿತು.


೨೦೧೫ ರಲ್ಲಿ ನಟಿ ಸಂಸದೆ ಹೇಮಾಮಾಲಿನಿ ಅವರೂ ಒಂದು ಕಾರು ಅಪಘಾತದಲ್ಲಿ ಗಾಯಗೊಂಡರು. ಇಷ್ಟೊಂದು ದೊಡ್ಡ ಅಪಘಾತ ಅಂದ್ರೆ ಹೇಮಾಮಾಲಿನಿ ಅದೃಷ್ಟವಶಾತ್ ಅಪಾಯದಿಂದ ಪಾರಾದರು. ಆದರೆ ಅವರ ಮುಖದ ತುಂಬಾ ಹೊಲಿಗೆಗಳು ಬಿದ್ದಿತ್ತು.

ನಟಿ ಜಾಯ್ರಾ ವಾಸಿಂ ’ದಂಗಲ್’ಫಿಲ್ಮ್ ಮೂಲಕ ಖ್ಯಾತಿ ಪಡೆದವರು. ಜೂನ್ ೨೦೧೭ ರಲ್ಲಿ ಕಾರು ಅಪಘಾತದಲ್ಲಿ ಅವರು ಗಾಯಗೊಂಡಿದ್ದರು.ಅವರು ಫ್ರೆಂಡ್ಸ್ ಜೊತೆ ತೆರಳುವಾಗ ಕಾರು ಡ್ರೈವರ್ ನ ಕಂಟ್ರೋಲ್ ತಪ್ಪಿತ್ತು.ಹಾಗೂ ಅಪಘಾತದಲ್ಲಿ ಕಾರು ಸರೋವರಕ್ಕೆ ಬಿದ್ದಿತ್ತು. ಆದರೆ ಅಕ್ಕಪಕ್ಕದ ಜನರು ಬಂದು ಜಾಯ್ರಾ ವಸೀಂ ಮತ್ತು ಅವರ ಫ್ರೆಂಡ್ಸ್ ನ ಪ್ರಾಣವನ್ನು ಬದುಕಿಸಿದರು.

ಬಾಲಿವುಡ್: ಕತ್ರಿನಾ ಗೆ ಕೊರೊನಾ

ದೇಶದಲ್ಲಿ ಕೊರೊನಾ ಸೋಂಕುರೋಗ ವೇಗವಾಗಿ ಹರಡುತ್ತಿದ್ದು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪಾಸಿಟಿವ್ ರೋಗಿಗಳು ಕಂಡುಬಂದಿದ್ದಾರೆ ಕಳೆದ ಮೂರ್ನಾಲ್ಕು ದಿನಗಳಲ್ಲಿ ವಿಕಿ ಕೌಶಲ್, ಅಕ್ಷಯ್ ಕುಮಾರ್, ಗೋವಿಂದ, ಭೂಮಿ ಪೆಡ್ನೇಕರ್, ಕನಿಕಾ ಮಾನ್, ಅಭಿಜಿತ್ ಸಾವಂತ್, ನಾರಾಯಣಿ ಶಾಸ್ತ್ರಿ, ರಾಜ್ ವೀರ್ ಸಿಂಗ್, ಆಲಿಯಾ ಭಟ್ಟ್, ರಾಜನ್ ಶಾಹಿ,ಅಬ್ರಾರ್ ಕಾಜಿ ಹೀಗೆ ಪಾಸಿಟಿವ್ ಜನರ ಈ ಪಟ್ಟಿ ಮುಂದುವರಿಯುತ್ತದೆ. ಇದೀಗ ಕತ್ರಿನಾ ಕೈಫ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಮಾತನ್ನು ತಿಳಿಸಿದ್ದಾರೆ. ಕತ್ರಿನಾ ಹೋಮ್ ಕ್ವಾರಂಟೇನ್ ಆಪ್ಷನ್ ಪಡೆದಿದ್ದಾರೆ. ಜೊತೆಗೆ ತನ್ನ ಸಂಪರ್ಕದಲ್ಲಿ ಬಂದವರೆಲ್ಲ ಕೊರೊನಾ ಟೆಸ್ಟ್ ಮಾಡಿಸುವಂತೆ ವಿನಂತಿಸಿದ್ದಾರೆ. ೩೬ ಗಂಟೆಯ ಮೊದಲು ಕತ್ರಿನಾರ ಬಾಯ್ ಫ್ರೆಂಡ್ ಎನ್ನಲಾಗುವ ವಿಕಿ ಕೌಶಲ್ ರ ಕೊರೊನಾ ರಿಪೋರ್ಟು ಕೂಡಾ ಪಾಸಿಟಿವ್ ಬಂದಿದೆ.

ಅಮಿತಾಭ್ ಬಚ್ಚನ್ ಜೊತೆ ’ಗುಡ್ ಬೈ’ ಸೆಟ್ಟ್ ನಲ್ಲಿ ರಶ್ಮಿಕಾ ಮಂದಣ್ಣ ರ ಜನ್ಮದಿನಾಚರಣೆ : ಸದಾ ಮಾಸ್ಕ್ ಧರಿಸಲು ಸಲಹೆ

ದಕ್ಷಿಣ ಭಾರತದ ನಟಿ ಕನ್ನಡತಿ ರಶ್ಮಿಕಾ ಮಂದಣ್ಣ ಏಪ್ರಿಲ್ ೫ರಂದು ತನ್ನ ೨೫ನೇ ಜನ್ಮದಿನ ವನ್ನು ’ಗುಡ್ ಬೈ’ ಸೆಟ್ಟ್ ನಲ್ಲಿ ಅಮಿತಾಭ್ ಬಚ್ಚನ್ ಜೊತೆಗೆ ಆಚರಿಸಿದರು.


ರಶ್ಮಿಕಾ ಮಂದಣ್ಣ ತನ್ನ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಕ್ಯಾಪ್ಶನ್ ಬರೆಯುತ್ತಾ -“ಇದು ಸಂತೋಷವಾಗಿರುವ ಖುಷಿಯ ದಿನ. ಒಂದು ಗಮನಿಸಿ – ಮಾಸ್ಕ್ ಕೇವಲ ಫೋಟೋಕ್ಕಾಗಿ ಮಾತ್ರ ತೆಗೆದಿದ್ದೆ ಹೊರತು ಸದಾಕಾಲ ಮಾಸ್ಕ್ ಎಲ್ಲರೂ ಧರಿಸಬೇಕು”ಎಂದಿದ್ದಾರೆ.


ಈ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ತನ್ನ ಮಾಸ್ಕ್ ತೆಗೆದಿದ್ದರು .ಆದರೆ ಅಮಿತಾಭ್ ಬಚ್ಚನ್ ಮಾಸ್ಕ್ ಧರಿಸಿದ್ದಾರೆ.
ಕೋವಿಡ್ ೧೯ ನಿಯಮವನ್ನು ಪಾಲಿಸಿ ಬರ್ತ್ ಡೇ ಆಚರಿಸಲಾಗಿತ್ತು. ಕೇಕ್ ಕತ್ತರಿಸುವ ಸಮಯವು ಎಲ್ಲರೂ ಮಾಸ್ಕ್ ಧರಿಸಿದ್ದರು.
ಬಾಲಿವುಡ್ ನಲ್ಲಿ ಗುಡ್ ಬೈ ರಶ್ಮಿಕಾ ಮಂದಣ್ಣರ ಎರಡನೇ ಫಿಲ್ಮ್. ತೆಲುಗು ಫಿಲ್ಮ್ ನಲ್ಲಿ ಈಗಾಗಲೇ ಒಂದೆರಡು ಹಿಟ್ ಫಿಲ್ಮ್ ಗಳನ್ನು ರಶ್ಮಿಕಾ ನೀಡಿದ್ದರು.
ಇದಕ್ಕಿಂತ ಮೊದಲು ಬಾಲಿವುಡ್ ನಲ್ಲಿ ಸಿದ್ಧಾರ್ಥ ಮಲೋತ್ರರ ನಾಯಕಿಯಾಗಿ ಮಿಷನ್ ಮಜ್ನೂ ನಲ್ಲಿ ಸಹಿ ಮಾಡಿದ್ದರು.ಗುಡ್ ಬೈ ಫಿಲ್ಮನ್ನು ವಿಕಾಸ್ ಬಹಲ್ ನಿರ್ದೇಶಿಸುತ್ತಿದ್ದಾರೆ.