ರಸ್ತೆ ಅಪಘಾತದಲ್ಲಿ ಮೃತ ವ್ಯಕ್ತಿ ಕುಟುಂಬಕ್ಕೆ ಧನಸಹಾಯ

ದಾವಣಗೆರೆ. ಜ.೩; ಕರ್ತವ್ಯವನ್ನು ಮುಗಿಸಿ  ಮನೆಗೆ ಹೋಗುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮೃತರಾದ ದಾವಣಗೆರೆ ವಿಶ್ವವಿದ್ಯಾನಿಲಯದ ಹೊರಗುತ್ತಿಗೆ ನೌಕರ ಕಾಂತೇಶ್  ಕುಟುಂಬಕ್ಕೆ ಹೊರಗುತ್ತಿಗೆ ನೌಕರರ ಸಂಘಟನೆಯು ಧನ ಸಹಾಯದ ನೆರೆವು ಕೇಳಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಕೆಲ ನೌಕರರು ನೀಡಿರುವ ಸಹಾಯದ ಹಣದಿಂದ ಸಂಗ್ರಹಿಸಿದ ಒಟ್ಟು  ಹಣವನ್ನು ಮೃತರ ಕುಟುಂಬದ ಇಬ್ಬರು ಹೆಣ್ಣು  ಮಕ್ಕಳಿಗೆ  ಕೇಂದ್ರ ಸರ್ಕಾರದ ಯೋಜನೆಯಾದ                 “ಸುಕನ್ಯ ಸಮೃದ್ದಿ ಯೋಜನೆ” ಖಾತೆಗಳಿಗೆ ಜಮೆ ಮಾಡಲಾಯಿತು. ಖಾತೆಯ ಪಾಸ್‌ಬುಕ್‌ಗಳನ್ನು ಮೃತರ ಪತ್ನಿ ರಂಜಿತಾ ಇವರಿಗೆ ವಿಶ್ವವಿದ್ಯಾನಿಯ ಉಸ್ತುವಾರಿ  ಕುಲಸಚಿವರಾಗಿದ್ದ ಪ್ರೊ. ವಡ್ಲಪುಡಿ ಕುಮಾರ್‌ರವರು ವಿತರಣೆ ಮಾಡಿದರು. ಮೃತರ ಕುಟುಂಬಕ್ಕೆ ಸಹಾಯದ ನೆರವು ನೀಡಿ ಮಾನವೀಯತೆ ಮೆರೆದ ನೌಕರರಿಗೆ ದಾವಿವಿ ಹೊರಗುತ್ತಿಗೆ ನೌಕರರ ಸಂಘಟನೆ ಅಧ್ಯಕ್ಷರು ಮಂಜುನಾಥ್ ಕೈದಾಳೆ ಹಾಗೂ ಉಪಾಧ್ಯಕ್ಷ ಪ್ರಕಾಶ್ ಎಲ್.ಎಚ್.  ಧನ್ಯವಾದಗಳನ್ನು ತಿಳಿಸಿದರು.