ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 12 ಲಕ್ಷಕ್ಕೂ ಅಧಿಕ ಸಾವು :ಆರ್.ಟಿ.ಓ. ನಾರಾಯಣ ನಾಯಕ ಟಿ.ಎಲ್

ಬೀದರ,ಮಾ.16: ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 12 ಲಕ್ಷಕ್ಕೂ ಅಧಿಕ ಸಾವು ಸಂಭವಿಸುತ್ತವೆ ಶೇಕಡಾ 16.9ರಷ್ಟು ಸಾವು, ಶೇಕಡಾ 10.39ರಷ್ಟು ತೀವ್ರ ಗಾಯಗೊಳ್ಳುತ್ತಾರೆ. 80 ಪ್ರತಿಶತರಷ್ಟು ಜನ ಅಂಗವಿಕಲರಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತುಕೊಂಡು ಹೆಲ್ಮಟ್ ಧರಿಸಿ ವಾಹನ ಚಾಲನೆ ಮಾಡಬೇಕೆಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾರಾಯಣಸ್ವಾಮಿ ನಾಯಕ ಟಿ.ಎಲ್. ರವರು ಹೇಳಿದರು.

ಇಂದು 15-3-2023ರಂದು ಆರ್.ಟಿ.ಓ. ಕಛೇರಿಯಲ್ಲಿನ ಕೆಲಸ ಕಾರ್ಯಗಳ ಬಗ್ಗೆ, ರಸ್ತೆ ನಿಯಮಗಳಬಗ್ಗೆ, ಚಿಹ್ನೆ ಕುರಿತು ಮಾಹಿತಿ ತಿಳಿದುಕೊಳ್ಳಲು ಕಚೇರಿಗೆ ಆಗಮಿಸಿದ ಬೀದರ ತಾಲ್ಲೂಕಿನ ಕಮಠಾಣಾ ಗ್ರಾಮದ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸಭಾಂಗಣದಲ್ಲಿ ಇಲಾಖೆ ಮತ್ತು ಬೀದರ ಮೋಟರ್ ವಾಹನ ಚಾಲನಾ ತರಬೇತಿ ಶಾಲೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ 50 ಜನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.

ತಮ್ಮ ಮನೆಯಲ್ಲಿರುವ 18 ವರ್ಷ ಮೇಲ್ಪಟ್ಟವರಿಗೆ ಈ ನಿಯಮಗಳನ್ನು ತಿಳಿಸಿ ಕಲಿಕಾ ಪರವಾನಿಗೆ ಪಡೆಯಲು ವಾಹನದೊಂದಿಗೆ ಆರ್ಸಿ ಬುಕ್ಕ್ ಪಿಯುಸಿ ಇನ್ಸುರನ್ಸ್ ದೊಂದಿಗೆ ಸುರಕ್ಷತಾ ವಾಹನ ಚಾಲನಾ ಮಾಡುವಂತೆ ತಿಳುವಳಿಕೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷೆತೆ ಮಾಹಿತಿಯುಳ್ಳ ಕ್ಯಾಲೆಂಡರ್ಗಳನ್ನು ವಿತರಿಸಿದರು.

ಸಂಘದ ಉಪಾಧ್ಯಕ್ಷ ಶಿವರಾಜ ಜಮಾದಾರ ಮಾತನಾಡಿ ರಸ್ತೆ ನಿಮಯಗಳನ್ನು ಪಾಲಿಸದೆ ಹೆಲ್ಮಟ್ ಧರಿಸಿದೇ ವಾಹನ ಚಾಲನೆ ಮಾಡಿದರೆ ವಾಹನ ಸವಾರರ ಜೀವಗಳಿಗೆ ಅಪಾಯ ಎಂದ ಅವರು ಸಂಚಾರ ಮಾಹಿತಿ ನೀಡುವ ಚಿಹ್ನೆ ಗಳ ಬಗ್ಗೆ ಸಹ ವಿವರವಾಗಿ ತಿಳಿಸಿದರು. ಶಾಲೆಯ ಮುಖ್ಯಗುರುಗಳಾದ ವೆಂಕಟರಾವ ಸಿಂಧೆ ಮಾತಾಡಿ ಮಾಹಿತಿ ನೀಡಿದ ಅರ್.ಟಿ.ಓ.ರವರಿಗೆ ಕೃಜ್ಞತೆ ಸಲ್ಲಿಸಿದರು.

ಸಂಘ ಅಧ್ಯಕ್ಷ ಪ್ರಕಾಶ ಗುಮ್ಮೆ, ಕಾರ್ಯಕ್ರಮದಲ್ಲಿ ಶಿಕ್ಷಿಕ ಶ್ರೀಮತಿ ಸಂಗೀತಾ, ಅಶೋಕ ಸಿಂಧೆ, ವೀರೇಂದ್ರ ಎಂ., ಅಂಬಿಕಾ, ನಾಗರಾಜ, ಸೈಯದ ಕಲೀಂ, ನಾಗೇಶ ಕಲಶೇಟ್ಟಿ, ಸುಪುತ್ರ ಚೌಳೆ, ಅರುಣ ಟೇಕರಾಜ ಉಪಸ್ಥಿತರಿದ್ದರು.