ರಸ್ತೆ ಅತಿಕ್ರಮಣ ತೆರವುಗೋಳಿಸಲು ಗ್ರಾಮಸ್ಥರಿಂದ ತಹಶೀಲ್ದಾರರಿಗೆ ಮನವಿ

ಮುದ್ದೇಬಿಹಾಳ:ಟಿ.12: ತಾಲೂಕಿನ ಅಗಸಬಾಳ ಗ್ರಾಮದಿಂದ ಜಾಯವಾಡಗಿಗೆ ಹೋಗುವ ಸಂಪರ್ಕ ರಸ್ತೆಯನ್ನು ಅಗಸಬಾಳ ಗ್ರಾಮದ ಬಸನಗೌಡ ಮರಿಲಿಂಗಪ್ಪಗೌಡ ಪಾಟೀಲ ಎಂಬುವವರು ಅತಿಕ್ರಮೀಸಿಕೋಂಡು ಜನರು ಮತ್ತು ವಾಹನ ಸವಾರರು ಓಡಾಡದಂತೆ ನಿರ್ಭಂದವಿದಿಸುತಿದ್ದು ಕೂಡಲೆ ರಸ್ತೆ ಅತಿಕ್ರಮೀಸಿಕೋಂಡವರ ವಿರುದ್ದ ಕ್ರಮ ಜರುಗಿಸಿ ಅತಿಕ್ರಮಣ ಮಾಡಿಕೋಂಡ ರಸ್ತೆಯನ್ನು ತೆರವುಗೋಳಿಸಬೇಕು ಎಂದು ಆಗ್ರಹಿಸಿ ಅಗಸಬಾಳ ಗ್ರಾಮಸ್ಥರು ಬುದುವಾರ ತಹಶೀಲ್ದಾರ ಜಿ.ಎಸ್.ಮಳಗಿಯವರಿಗೆ ಮನವಿ ಸಲ್ಲಿಸಿದರು.
ಅಗಸಬಾಳ ಗ್ರಾಮದಿಂದ ಜಾಯವಾಡಗಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಯನ್ನೆ ಬಸನಗೌಡ ಅವರು ಅತಿಕ್ರಮೀಸಿಕೋಂಡು ರಸ್ತೆ ಮದ್ಯದಲ್ಲಿ ಒಡ್ಡು ಹಾಕಿ ವಾಹನ ಮತ್ತು ಜನರು ಓಡಾಡದಂತೆ ಮಾಡಿದ್ದಾರೆ ಈ ಕುರಿತು ಅನೇಕ ಸಲ ಢವಳಗಿ ಗ್ರಾಮ ಪಂಚಾಯತಿಯವರಿಗೆ ಮತ್ತು ಪೋಲಿಸ ಇಲಾಖೆಯವರಿಗೆ ತಿಳಿಸಿದರು ಯಾವುದೆ ಪ್ರಯೋಜನವಾಗಿರುವದಿಲ್ಲ. ಒಮ್ಮೆ ಪೋಲಿಸರು ಬಂದು ತಿಳಿ ಹೇಳಿದರು ಪದೆ,ಪದೆ ರಸ್ತೆ ಮದ್ಯ ಒಡ್ಡು ಹಾಕಿ ಸಾರ್ವಜನಿಕರಿಗೆ ಓಡಾಡಲು ನಿರ್ಭಂದಿಸುತಿದ್ದಾರೆ ಎಂದು ಮನವಿಯಲ್ಲಿ ಗ್ರಾಮಸ್ಥರು ತಿಳಿಸಿದ್ದಾರೆ.
ಸದರಿ ರಸ್ತೆಯಿಂದಲೆ ಶಾಲಾ ಮಕ್ಕಳು ಶಾಲೆಗೆ ತೆರಳಬೆಕಿದ್ದು ಈಗ ರಸ್ತೆ ಮದ್ಯದಲ್ಲಿ ಒಡ್ಡು ಹಾಕಿರುವ ಕಾರಣ ಮಳೆ ನೀರು ನಿಂತು ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಓಡಾಡದಂತಾಗಿದೆ. ಈ ಕೂಡಲೆ ಸಂಬಂಧಿಸಿದ ಇಲಾಖೆಯವರು ರಸ್ತೆ ಮದ್ಯ ಹಾಕಿರುವ ಒಡ್ಡನ್ನು ತೆರವುಗೋಳಿಸಿ ಸಾರ್ವಜನಿಕರಿಗೆ ಓಡಾಡಲು ಮುಕ್ತಗೋಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ದುಂಡೆಪ್ಪ ಅರಸಣಗಿ, ಅರವಿಂದ ಕಾಶೀನಕುಂಟಿ, ಸುರೇಶ ಕಟ್ಟಿ, ಎನ್.ಆರ್.ಮೋಕಾಶಿ, ಶಂಕರ ಕುಂಬಾರ, ಭೀಮರಾಯ ಕಾಶಿನಕುಂಟಿ, ಸಂಗಣ್ಣ ಪೂಜಾರಿ, ನಾಗು ಹಳ್ಳೂರ, ಶಂಕರಗೌಡ ಕಾಶೀನಕುಂಟಿ ಸೇರಿದಂತೆ ಮತ್ತಿತರರು ಇದ್ದರು.