ರಸ್ತೆ ಅಗಲೀಕರಣ: ಸಭೆ

ಬ್ಯಾಡಗಿ,ಜೂ8: ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ-136 (ಮುಖ್ಯರಸ್ತೆ) ಅಗಲೀಕರಣ 750 ಮೀಟರ್ ವಿಳಂಬದಿಂದ ಸಾರ್ವಜನಿಕರು ಸೇರಿದಂತೆ ಲಕ್ಷಾಂತರ ಪ್ರಯಾಣಿಕರಿಗೆ ನಿತ್ಯ ತೊಂದರೆಯಾಗುತ್ತಿದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯರಸ್ತೆ ಅಗಲೀಕರಣ ಅನಿವಾರ್ಯ ಸರ್ಕಾರದ ಜೊತೆಗೆ ಅನಗತ್ಯ ಜಿದ್ದಿಗೆ ಬೀಳುವುದು ಯಾರಿಗೂ ಸಮ್ಮತವಲ್ಲ, ಸ್ವಇಚ್ಚೆಯಿಂದ ಅನುಕೂಲ ಕಲ್ಪಿಸಿಕೊಡುವಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.
ಪಟ್ಟಣದ ಶ್ರೀ ಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಮುಖ್ಯರಸ್ತೆ ನಿವಾಸಿಗಳು ಮತ್ತು ಅಧಿಕಾರಿಗಳೊಂದಿಗೆ ಜರುಗಿದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಹಿಂದೆ ಶಾಸಕನಾಗಿದ್ದ ವೇಳೆ ಮುಖ್ಯರಸ್ತೆ ಅಗಲಿಕರಣಕ್ಕೆ ಚಾಲನೆ ನೀಡಿದ್ದೆ, ಮುಖ್ಯರಸ್ತೆಯಲ್ಲಿನ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ವಿಳಂಬವಾಯಿತು, ಇದೀಗ ಮತ್ತೆ ಶಾಸಕನಾಗಿದ್ದು ಅಗಲೀರಣಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದ್ದು ಸುಂದರವಾದ ಮುಖ್ಯರಸ್ತೆಯನ್ನು ನಿರ್ಮಿಸಿಕೊಡಲು ಬದ್ಧನಾಗಿದ್ದೇನೆ ಎಂದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ನಿಮ್ಮಗಳ ಹಠಮಾರಿತನ ಧೋರಣೆಯಿಂದ ಅಂತರಾ ಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣಕ್ಕೆ ಕಳಂಕ ಬರುತ್ತಿದೆ, ಅಭಿವೃದ್ಧಿ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊ ಳ್ಳಲು ಸಿದ್ಧವಿಲ್ಲ, ವರ್ತಕರ ಸಂಘದ ಅಧ್ಯಕ್ಷನಾಗಿ ಮುಖ್ಯರಸ್ತೆಯಲ್ಲಿರುವ ಜನರು 15 ರಿಂದ 20 ಅಡಿಯಷ್ಟು ಜಾಗ ನೀಡಿದರೇ ಕಳೆದು ಕೊಳ್ಳುವಂತಹದ್ದೇನಿಲ್ಲ ನಮ್ಮೂರಿನ ಅಭಿವೃದ್ಧಿಗೆ ನಾವೇ ಸಹಕರಿಸದಿದ್ದರೇ ಹೇಗೆ ಪೂರಕವಾದ ನಿಲುವು ಹಾಗೂ ಸಲಹೆಗಳನ್ನು ಮುಕ್ತ ವಾಗಿ ಸ್ವಾಗತಿಸುತ್ತೇವೆ ಎಂದರು.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ವಾಹನಮೂಲಕ ಮೆಣಸಿನಕಾಯಿ ಹೊತ್ತು ತರುವುದಷ್ಟೇ ಅಲ್ಲ ನಮ್ಮೆಲ್ಲರ ಆರ್ಥಿಕ ಅಭಿವೃದ್ಧಿಗೆ ಕಾರಣೀಭೂತ ರಾದ ರೈತರು ಸೇರಿದಂತೆ ಕಿಷ್ಕಿಂಧೆಯಾ ಗಿರುವ ಮುಖ್ಯರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬರೂ ಸ್ಥಳೀಯ ಶಾಸಕರು ಹಾಗೂ ಸರ್ಕಾರವನ್ನು ಶಪಿಸದೇ ತೆರಳುವುದಿಲ್ಲ, ಅಗತ್ಯಕ್ಕೆ ತಕ್ಕಂತೆ ಅಗಲೀಕರಣ ಹಾಗೂ ಅಭಿವೃದ್ಧಿಪಡಿಸುವುದು ಸರ್ಕಾರದ ಕರ್ತವ್ಯ, ಸೌಹಾರ್ದ ಮತ್ತು ಸಕಾರಾತ್ಮಕ ಚರ್ಚೆಗಳೊಂದಿಗೆ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳಬೇಕೆ ವಿನಃ ಅದನ್ನು ವಿರೋಧ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.
ನ್ಯಾಯವಾದಿ ಸಿದ್ಧಲಿಂಗಪ್ಪ ಶೆಟ್ಟರ ಮಾತನಾಡಿ, ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ-136 ಅಗಲೀಕರಣ ಮಾ ಡುವ ಮುನ್ನವೇ ಇದನ್ನು ಕೇವಲ ಬ್ಯಾಡಗಿ ಮುಖ್ಯರಸ್ತೆ ಎಂದು ಡಿನೋಟಿಫೈ ಮಾಡಿಕೊಡಬೇಕು ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಗೆಜೆಟ್‍ನಲ್ಲಿ ಪ್ರಕಟಿಸಿ ಬಳಿಕ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಅವರು ಹೈಕೋರ್ಟಗೆ ಅಫಿಡೇವಿಟ್ ಸಲ್ಲಿಸಬೇಕು ಅಂದಾಗ ಮಾತ್ರ ಅಗಲೀಕರಣಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.
ಅಗಲೀಕರಣ ವಿರೋಧಿ ಸಮಿತಿ ಸದಸ್ಯ ಮುರಿಗೆಪ್ಪ ಶೆಟ್ಟರ ಮಾತನಾಡಿ, ಅಭಿವೃದ್ಧಿ ಎಂದರೆ ಮನೆಗಳನ್ನು ಒಡೆದು ರಸ್ತೆಗಳನ್ನು ನಿರ್ಮಿಸುವುದಲ್ಲ, ನಮ್ಮ ಹಿತಾಸಕ್ತಿಯನ್ನೂ ಸಹ ಸರ್ಕಾರ ಕಾಯ್ದುಕೊಳ್ಳಬೇಕಾಗುತ್ತದೆ, ಅಗಲೀಕರಣದ ಪರವಾಗಿ ನಾವಿದ್ದೇವೆ ಆದರೆ ಸೂಕ್ತ ಪರಿಹಾರ ಸೇರಿದಂತೆ ಬೈಪಾಸ್ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ವೇದಿಕೆಯಲ್ಲಿ ತಹಶೀಲ್ದಾರ ಎಸ್.ಎ.ಪ್ರಸಾದ್, ಸಿಪಿಐ ಬಸವರಾಜಪ್ಪ, ಮುಖ್ಯಾಧಿಕಾರಿ ಎಸ್.ಎಂ.ಗೊರೋಶಿ, ಸುರೇಶ ಮೇಲಗಿರಿ, ಜಯದೇವ ಶಿರೂರ, ರಾಜು ಮೋರಿಗೇರಿ ಹಾಗೂ ಇನ್ನಿತರರಿದ್ದರು.

ಬಾಕ್ಸ್:
ಮುಖ್ಯರಸ್ತೆ ಅಗಲೀಕರಣದಿಂದ ಸಂಪೂರ್ಣ ಆಸ್ತಿ ಕಳೆದುಕೊಂಡ ಮಾಲೀಕರು ಭಯಪಡುವ ಅಗತ್ಯ ವಿಲ್ಲ ಪರಿಹಾರದ ಮೊತ್ತದ ಜೊತೆಗೆ ಪುರಸಭೆ ವ್ಯಾಪ್ತಿಯಲ್ಲಿ ಬಾಡಿಗೆ ರೀತ್ಯ ಮಳಿಗೆ, ಹೊರವಲಯದಲ್ಲಿ ಖಾಲಿ ನೀವೇಶನ ಸೇರಿದಂತೆ 3 ಭರವಸೆಗಳನ್ನು ಶಾಸಕ ಬಸವರಾಜ ಶಿವಣ್ಣನವರ ಸಭೆಯಲ್ಲಿ ಘೋಷಿಸಿದರು.

ಬಾಕ್ಸ್:
ಸರ್ಕಾರ ಈಗಾಗಲೇ ಎರಡೂ ಬದಿ ಸೇರಿ 66 ಅಡಿ ರಸ್ತೆ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದೆ, ಸದರಿ ಅಳತೆಗೆ ಮುಖ್ಯರಸ್ತೆಯ ಮಾಲೀಕರು ಸಹ ಮಾನಸಿಕವಾಗಿ ಸಿದ್ಧವಾಗಿದ್ದಾರೆ, ಆದರೆ ಅಗಲೀಕರಣದ ಅಳತೆಯನ್ನು ಹೋರಾಟ ಸಮಿತಿಯೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ-136 ಇದನ್ನು ಡಿನೋಟಿಫೈ ಮಾಡುವ ಪ್ರಸ್ತಾವನೆ ಸರ್ಕಾ ರದ ಮುಂದಿಲ್ಲ, ಆದರೆ ಅಲ್ಲಿನ ನಿವಾಸಿಗಳ ಬೇಡಿಕೆಯಂತೆ ಬೈಪಾಸ್ ನಿರ್ಮಿಸುವ ಮೂಲಕ ಹೆದ್ದಾರಿ ಪಥ ಬದಲಿಸಿದಲ್ಲಿ ಮಾತ್ರ ‘ಡಿ’ ನೋಟಿಫೈ ಮಾಡಲು ಸಾಧ್ಯ.. ಶಾಸಕ ಬಸವರಾಜ ಶಿವಣ್ಣನವರ.

ಕೋಟ್:
ಕಾರ್ಯಪ್ರವೃತ್ತರಾಗಿದ್ದೇವೆ:ಅಗಲೀರಕಣ ಪರಿಹಾರ ನೀಡಲು 15.60ಕೋಟಿ ಹಣವಿದೆ, ಅಲ್ಲದೇ ಪುರಸಭೆ ಮಾಡಿದ ಠರಾವಿನಂತೆ ಸಾಮಥ್ರ್ಯ ಕಳೆದುಕೊಂಡು ಶಿಥಿಲಾವಸ್ಥೆ ತಲುಪಿದ ಮುಖ್ಯರಸ್ತೆಯಲ್ಲಿನ ಕಟ್ಟಡ ತೆರವುಗೊಳಿಸುವ ವಿಚಾರದಲ್ಲಿ ಈಗಾಗಲೇ ಕಾರ್ಯೋ ನ್ಮುಖರಾಗಿದ್ದೇವೆ.. ಉಮೇಶ ನಾಯಕ್ ಎಇಇ ಲೋಕೋಪಯೋಗಿ ಇಲಾಖೆ ಬ್ಯಾಡಗಿ.