ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ತಾರತಮ್ಯ ಪಿಡಿಒಗೆ ಗ್ರಾಮಸ್ಥರ ಮನವಿ

ಕಮಲನಗರ : ಸೆ.24:ತಾಲೂಕಿನ ಮದನೂರ-ಕಮಲನಗರ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ತಾರತಮ್ಯ: ಗ್ರಾಮಸ್ಥರಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ದಶಕಗಳ ಹೋರಾಟದ ಫಲವಾಗಿ ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‍ವೈ) ಯೋಜನೆ-III ರಡಿ ಕೈಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಸಮರ್ಪಕವಾಗಿರಲಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮದನೂರ ಗ್ರಾಮದ ಹನುಮಾನ ದೇವಸ್ಥಾನದಿಂದ ಕಮಲನಗರ ವರೆಗೆ ನಡೆಯುತ್ತಿರುವ 3.96 ಕೋಟಿ ರೂಪಾಯಿಗಳ ರಸ್ತೆ ಅಗಲೀಕರಣದ ಕಾಮಗಾರಿಯಲ್ಲಿ ಯಾವುದೇ ತಾರತಮ್ಯ ಮಾಡದೆ ರಸ್ತೆ ಅಗಲೀಕರಣ ಕಾಮಗಾರಿ ನಿಗದಿತ ಸರ್ಕಾರದ ಅಂದಾಜಿನ ಮೇರೆಗೆ ವಿಸ್ತೀರ್ಣಕ್ಕೆ ತಕ್ಕಂತೆ 50 ಅಡಿಯ ಅಗಲೀಕರಣ ಕಾಮಗಾರಿ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮದನೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಅವರಿಗೆ ಗ್ರಾಮಸ್ಥರ ಸಹಿ ಸಂಗ್ರಹಿಸಿರುವ ಮನವಿ ಪತ್ರ ನೀಡಿ ಸರ್ಕಾರದ ಅಧಿಸೂಚನೆಯ ಮೇರೆಗೆ ಕಾಮಗಾರಿ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸಮರ್ಪಕವಾಗಿ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿ ಆಗದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಮನವಿ ಪತ್ರದಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾಗೇಶ್ ಗಾಳೆಪ್ಪ ಬಳತೆ, ವೈಜಿನಾಥ ದಾಬಕೆ, ದೇವಿಂದ್ರ ಗುಣವಂತ ಬಿರಾದರ್, ಬಾಲಾಜಿ ಬಳತೆ, ಸೂರ್ಯಕಾಂತ ಬಿರಾದರ್, ಪ್ರಮೋದ್ ಬಿರಾದರ್, ಬಾಲಾಜಿ,ಸಂದೀಪ್, ಮಹದೇವ್, ಹನುಮಂತ ನಾಗೇಶ್ ಜೈಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.