
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.03 : ತಾಲ್ಲೂಕಿನ ಹಲುವಾಗಲು ಗ್ರಾಮದ ಪ್ರಮುಖ ರಸ್ತೆಗೆ 2 ಕೋಟಿ ಅನುದಾನದಲ್ಲಿ ಸಿ.ಸಿ ರಸ್ತೆ ಮತ್ತು ಬಾಕ್ಸ್ ಚರಂಡಿ ಹಾಗೂ ಅಗಲೀಕರಣಕ್ಕೆ ಪೊಲೀಸ್ ಬಂದೋ ಬಸ್ತ್ ನಲ್ಲಿ ಕಾರ್ಯನಿರ್ವಹಿಸಲು ಲೋಕೋಪಯೋಗಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದನ್ನು ವಿರೋಧಿಸಿದ ಸ್ಥಳೀಯರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದಗೆ ಮನವಿ ಸಲ್ಲಿಸಿದರು
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಡಿ,ಸೋಮಲಿಂಗಪ್ಪ ಮಾತನಾಡಿ ರಸ್ತೆ ಅಗಲೀಕರಣದ ಅನುಷ್ಠಾನ ಗ್ರಾಮ ಪಂಚಾಯಿತಿಗೆ ಸರ್ವಾಧಿಕಾರವಾಗಿದೆ ಆದರೆ ಹಾಲಿ ಶಾಸಕರ ಒತ್ತಾಯದಿಂದ ಅಧಿಕಾರಿಗಳು ಅಗಲೀಕರಣ ಮಾಡುವುದು ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,
ರಸ್ತೆ ಅಗಲೀಕರಣದಿಂದ ಮನೆ ಅಂಗಡಿಗಳನ್ನು ಕಳೆದುಕೊಳ್ಳುವ ಮಹಿಳೆ ಲಲಿತಮ್ಮ ಕಣ್ಣೀರು ಹಾಕಿದರು ಹೊಲ ಮಾರಿ ವಾಸಕ್ಕೆ ಮಾಡಲು ಮನೆ ಕಟ್ಟಿಸಿ ಕೊಂಡಿದ್ದರು ಆದರೆ ರಸ್ತೆ ಅಗಲೀಕರಣದಿಂದ ನನ್ನ ಮನೆ ನಾಶವಾಗಲಿದೆ ನಮಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು ಇಲ್ಲದಿದ್ದರೆ ಮುಂದಿನ ನನ್ನ ಜೀವನ ಹೇಗೆ ಎಲ್ಲಿ ಸಾಗಿಸಬೇಕು ಎಂದು ಕಣ್ಣೀರು ಹಾಕಿದರು.
ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಪ್ರಕಾಶ್ ನಾಯ್ಕ್ ಮಾತನಾಡಿ ಹಲುವಾಗುಲು ಗ್ರಾಮಕ್ಕೆ ಹೋಗುವಾಗ ವಾಹನ ಸಂಚಾರಕ್ಕೆ ಆಡಚಣೆ ಆಗುವುದುರಿಂದ ರಸ್ತೆ ಅಗಲೀಕರಣಕ್ಕೆ ಅನಿವಾರ್ಯ ಸಿ.ಸಿ ರಸ್ತೆಗೆ 46 ಮೀಟರ್ ಬೇಕು ಆದ್ದರಿಂದ ಅಡಚಣೆಗಳು ಆದ ಕಾರಣಕ್ಕೆ ಅಗಲೀಕರಣಕ್ಕೆ ಮಾಡಬೇಕು ಮಾನವೀಯತೆ ದೃಷ್ಟಿಯಿಂದ ರಸ್ತೆ ಮಧ್ಯಭಾಗದಿಂದ 25 ಅಡಿ ಮಾತ್ರ ಗುರುತಿಸಿದ್ದೇವೆ ಹಿಂದಿನಿಂದ ಒಂದು ವಾರದೊಳಗೆ ಸ್ವಯಿಚ್ಛೆಯಿಂದ ತೆರವು ಮಾಡಿಕೊಳ್ಳುವುದಕ್ಕೆ ಅಂತಿಮ ಅವಕಾಶ ನೀಡುತ್ತಿದ್ದೇವೆ ಇಲ್ಲದಿದ್ದರೆ ಇಲಾಖೆಯ ಜೆಸಿಬಿಯಿಂದ ತೆರವು ಕಾರ್ಯ ಮಾಡುತ್ತೇವೆ ಎಂದರು,
ಇದಕ್ಕೆ ಒಪ್ಪದ ಗ್ರಾಮಸ್ಥರು ಮಧ್ಯಭಾಗದಿಂದ 22 ಅಡಿ ಮಾಡಿಕೊಂಡು ಚರಂಡಿ ಹಾಗೂ ರಸ್ತೆ ನಿರ್ಮಿಸಬೇಕೆಂದು ನೀವು ನೀಡುತ್ತಿರುವ ಕಾಲಾವಕಾಶದಲ್ಲಿ ನಾವು ತೆರವು ಮಾಡುತ್ತೇವೆ ಎಂದು ಒತ್ತಾಯಿಸಿದರು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಸಕರ ಮೂಲಕ ಒಂದು ವಾರದೊಳಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು ಇಲ್ಲದಿದ್ದರೆ ನಾವು ಕೆಲಸ ಪ್ರಾರಂಬಿಸುತ್ತೇವೆ ಎಂದು ವಾಗ್ವಾದಕ್ಕೆ ತೆರೆ ಎಳೆದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯರಬಾಳು ವೈ ರುದ್ರಪ್ಪ, ಪಿಡಿಓ ಆನಂದ್ ನಾಯ್ಕ್, ಸ್ಥಳೀಯರಾದ ಎನ್.ರಮೇಶ್, ಎ.ಸಮಂತ್, ಎಂ.ನಾಗರಾಜ್, ಈಶಣ್ಣ, ಬಸಪ್ಪ, ಕರಿಬಸಪ್ಪ, ಕರಡಿ ಹನುಮಂತ, ಎ ನಾಗರಾಜ್, ಕಬ್ಬಳಿ ಗಂಗಮ್ಮ, ಎಸ್ ಜಗದೀಶ್, ವಿ.ರವೀಂದ್ರ, ಮಂಜುನಾಥ್, ಎನ್.ಮಂಜಪ್ಪ, ರಾಹುಲ್,ಎಚ್ ಶ್ರೀನಿವಾಸ್, ಮಾಳಮ್ಮ, ಎನ್.ಇಂದ್ರಪ್ಪ, ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು