ದೇವದುರ್ಗ,ಜೂ.೨೬-
ಸಮೀಪದ ಜಾಲಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳ ಅಗಲಿಕರಣ ಮಾಡಬೇಕೆಂದು ರಾಜಾ ವಾಸುದೇವ ನಾಯಕ ಹೇಳಿದರು.
ಅವರು ಪಟ್ಟಣದಲ್ಲಿ ಸಂಜೆವಾಣಿ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಕಳೆದ ೨೦೧೧-೧೨ ರಲ್ಲಿಯೇ ಎಸ್ಸಿಪಿ ಹಾಗೂ ಎಸ್ಟಿಪಿ ಯೋಜನೆ ಅಡಿ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಅವರು ಸುಮಾರು ೨೨ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಮಂಜೂರು ಮಾಡಿದ್ದರು. ಕಾಮಗಾರಿ ಕೂಡ ನಿರ್ಮಿಸಿದ್ದಾರೆ.
ಆದರೆ, ಪ್ರಮುಖ ರಸ್ತೆಗಳಾದ ಅಂಬೇಡ್ಕರ್ ವೃತ್ತದಿಂದ ರಂಗನಾಥ ಸ್ವಾಮಿ ದೇವಸ್ಥಾನ, ವಾಲ್ಮೀಕಿ ವೃತ್ತದವರೆ ರಸ್ತೆ ಅಗಲಿಕರಣ ಬೇಕಾಬಿಟ್ಟಿಯಾಗಿ ಮಾಡಿದ್ದಾರೆ. ಈಗಾಗಲೇ ಬಡವರು ರಸ್ತೆಯ ಪಕ್ಕದ ಮನೆಗಳ ಸ್ವತಃ ತೆರವುಗೊಳಿಸಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತದ್ದಾರೆ. ತಕ್ಷಣವೇ ಅಧಿಕಾರಿಗಳು ರಸ್ತೆಗೆ ಅಗಲಿಕರಣಕ್ಕೆ ತೆರವು ಮಾಡಿಕೊಂಡ ನಿರಾಶ್ರಿತರಿಗೆ ತಾಲ್ಲೂಕು ಅಡಳಿತ ದಿಂದ ಪರಿಹಾರ ಒದಗಿಸಬೇಕು.
ಉಳಿದ ರಸ್ತೆ ಅಗಲಿಕರಣವನ್ನು ಪೂರ್ಣಗೊಳಿಸಿ ಶ್ರೀಮಂತರ ವಿವಿಧ ವಾಣಿಜ್ಯ ಮಳಿಗೆ ಹಾಗೂ ಮನೆಗಳನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ನೂತನ ಶಾಸಕಿ ಅವರು ಜಾಲಹಳ್ಳಿ ಪಟ್ಟಣದಲ್ಲಿ ಜನತೆಗೆ ಅಗತ್ಯ ಸೌಲಭ್ಯ ಒದಗಿಸಲು ವಿಶೇಷ ಅನುದಾನ ಕಲ್ಪಿಸಬೇಕು. ಪಟ್ಟಣದಿಂದಲೇ ಅದು ಹೋಗಿರುವ ತಿಂಥಣಿ ಬ್ರಿಜ್- ಕಲ್ಮಲಾ ರಾಜ್ಯ ಹೆದ್ದಾರಿಗೆ ವಿಭಜ ನಿರ್ಮಿಸಿ ರಸ್ತೆಯ ಎರಡು ಬಂದಿಗೆ ಅಕ್ರಮವಾಗಿ ಇರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ, ಸೌರ್ಯಶಕ್ತಿ ದೀಪಾ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪೋಟೋ೨೬ಜvಜ.೧