ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿ ಅಂಗಡಿಗಳ ತೆರವು

ವಿಜಯಪುರ,ಮೇ೧೪:ಪಟ್ಟಣದ ಶಿವಗಣೇಶ ಸರ್ಕಲ್ ಬಳಿಯಿಂದ ಕೋಲಾರ ರಸ್ತೆ ಅಗಲೀಕರಣಕ್ಕಾಗಿ ಅಕ್ರಮವಾಗಿ ಇಡಲಾಗಿದ್ದ ರಸ್ತೆ ಬದಿ ಅಂಗಡಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಪುರಸಭೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು.
ಕೋಲಾರ ರಸ್ತೆಯು ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಅಗಲಿಕರಣ ಕಾಮಗಾರಿಯನ್ನು ಕೆಲ ದಿನಗಳ ಹಿಂದೆ ಪ್ರಾರಂಭಿಸಿ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಅಂಗಡಿ ಮಾಲೀಕರಿಗೆ ತೆರವು ಮಾಡಲು ಅಳತೆ ಮಾಡಿ, ಕೆಲವರು ತಮ್ಮ ಅಂಗಡಿಗಳ ತೆರವಿಗೆ ಮಾರ್ಕ್ ಮಾಡಲು ಪೋಲಿಸ್ ಇಲಾಖೆಯೊಂದಿಗೆ ಅಧಿಕಾರಿಗಳು ಇಂದು ನಿರ್ಧಾಕ್ಷೀಣ್ಯ ಕ್ರಮಕ್ಕೆ ಮುಂದಾದರು.
ಅಂಗಡಿಗಳ ತೆರವು: ರಸ್ತೆಗಳ ಅಗಲೀಕರಣಕ್ಕಾಗಿ ರಸ್ತೆಯಲ್ಲಿ ಬರುವ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣಗೆ ಕೆಲ ತಿಂಗಳಷ್ಟೇ ಸಚಿವರು ಚಾಲನೆ ನೀಡಿದ್ದರು. ಲೋಕಸಭಾ ಚುನಾವಣೆ ಇದ್ದ ಕಾರಣ ಕೆಲಸ ನಿಲ್ಲಿಸದ ಕಾರಣ ಇಂದು ಮಾರ್ಕ್ ಮಾಡಲಾಯಿತು. ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳಲು ಚಿಲ್ಲರೆ ಅಂಗಡಿ, ಹಣ್ಣು ಅಂಗಡಿಗಳಿಗೆ ಅವಕಾಶ ಕೇಳಿದ್ದರೂ, ಅವಕಾಶ ನೀಡದೆ ಕಾರ್ಯಾಚರಣೆ ಮಾಡಲಾಯಿತು.
ಕಣ್ಣೀರಿಟ್ಟ ಬೀದಿ ವ್ಯಾಪಾರಿಗಳು: ಕೋಲಾರ ಮುಖ್ಯರಸ್ತೆಯಲ್ಲಿ ನೂರಾರೂ ಬಡ ಕುಟುಂಬಗಳು ಪ್ರತಿದಿನ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದಂತಹ ಅಂಗಡಿಗಳನ್ನು ಏಕಾಏಕಿ ಯಾವುದೇ ನೋಟಿಸ್ ನೀಡದೇ, ಸಮಯ ಅವಕಾಶ ನೀಡದೇ, ಅಧಿಕಾರಿಗಳು ಅಂಗಡಿಗಳನ್ನು ತೆರವು ಮಾಡಿಸಲು ಜೆಸಿಬಿ ತಂದಿದ್ದು, ನಾವು ಎಲ್ಲಿ ಹೋಗಬೇಕು? ನಮ್ಮ ಜೀವನ ಮಾಡುವ ಏನು ಮಾಡಬೇಕು? ಎಂದು ತಮ್ಮ ಅಳಲನ್ನು ರಾಘವ, ಚಂದ್ರು, ನಾಗರತ್ನಮ್ಮ, ಮುನಿರಾಜು ಸೇರಿದಂತೆ ಹಲವಾರು ತೋಡಿಕೊಂಡರು.
ಮರಗಳನ್ನು ಕಡಿಯಲು ವಿರೋಧ: ನೂರಾರು ವರ್ಷಗಳ ಹಿಂದೆ ನೆಟ್ಟ ವಿವಿಧ ರೀತಿಯ ಬೃಹತ್ ಗಾತ್ರದ ಮರಗಳನ್ನು ರಸ್ತೆ ಅಗಲೀಕರಣದ ಹಿನ್ನಲೆ ೫೦ ಕ್ಕೂ ಹೆಚ್ಚು ಮರಗಳನ್ನು ತೆರವು ಮಾಡಲು ಪರಿಸರ ಪ್ರೇಮೆಗಳು ವಿರೋಧವನ್ನು ವ್ಯಕ್ತಡಿಸಿದರು.