
ಲಕ್ಷ್ಮೇಶ್ವರ,ಮೇ.20: ಅಡರಕಟ್ಟಿ ಬಟ್ಟೂರು ಮಧ್ಯ ಕೇವಲ ಮೂರು ತಿಂಗಳ ಹಿಂದೆ ನಿರ್ಮಿಸಿರುವ ಲೋಕೋಪಯೋಗಿ ಇಲಾಖೆಯ ಡಾಂಬರೀಕರಣ ಗೊಂಡ ರಸ್ತೆಯು ಅಂಚಿನಲ್ಲಿ ಭಾರಿ ಪ್ರಮಾಣದ ಬಿರುಕು ಬಿಟ್ಟಿದ್ದು ಅದನ್ನು ಮುಚ್ಚಲು ತೇಪೆ ಹಚ್ಚುವ ಕೆಲಸ ಮಾಡಿದ್ದರು ಒಂದೇ ಸಮನೆ ರಸ್ತೆ ಅಂಚಿನಲ್ಲಿ ಬಿರುಕು ಹೆಚ್ಚು ತಲೆ ಇದೆ.
ಕೇವಲ ಮೂರು ತಿಂಗಳ ಹಿಂದೆ ನಿರ್ಮಿಸಿರುವ ಈ ರಸ್ತೆಯ ಸ್ಥಿತಿ ಬಿರು ಬಿಸಿಲಿನಲ್ಲಿಯೇ ಈ ರೀತಿಯಾದರೆ ಮಳೆಗಾಲದಲ್ಲಿ ನೀರು ತುಂಬಿಕೊಂಡು ಇಡೀ ರಸ್ತೆ ಒಂದು ಭಾಗದಿಂದ ಕುಸಿದು ರಸ್ತೆಯೇ ಸಂಚಾರಕ್ಕೆ ಅಡ್ಡಿಯಾಗುವ ಆತಂಕವಿದೆ.
ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿದರು ಗುತ್ತಿಗೆದಾರರು ಇಂಜಿನಿಯರ್‍ಗಳು ಆಡಿದ್ದೆ ಆಟವಾಗುವುದರಿಂದ ಮತ್ತು ಹಿರಿಯ ಅಧಿಕಾರಿಗಳು ಉಸ್ತುವಾರಿ ಮಾಡದಿರುವುದರಿಂದ ಇಂಥ ಸ್ಥಿತಿ ಎದುರಾಗಿ ಸರ್ಕಾರದ ಬೊಕ್ಕಸಕ್ಕೆ ಹಾನಿಯ ಜೊತೆಗೆ ಸಾರ್ವಜನಿಕರ ದುಡ್ಡಿಗೆ ಪಂಗನಾಮ ಬೀಳಲಿದೆ ಎನ್ನಲಾಗುತ್ತಿದೆ.
ಈ ಕುರಿತು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿ ಸರ್ಕಾರ ನೀರಿನಂತೆ ಹಣ ಖರ್ಚು ಮಾಡಿ ರಸ್ತೆ ನಿರ್ಮಿಸುತ್ತಿದ್ದರು ಕಳಪೆ ಕಾಮಗಾರಿ ಇಂಜಿನಿಯರುಗಳ ನಿರ್ಲಕ್ಷದಿಂದಾಗಿ ಹಾಳಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.