
ಕಲಬುರಗಿ,ಮಾ.3- ಕೇಂದ್ರ ಬಸ್ ನಿಲ್ದಾಣದ ಎದುರಿನ ಎಂಎಸ್‍ಕೆ ಮಿಲ್ ರಸ್ತೆ ಜೇವರ್ಗಿ ಕ್ರಾಸ್ ದಿಂದ ಕಣ್ಣಿ ತರಕಾರಿ ಮಾರುಕಟ್ಟೆ ಕ್ರಾಸ್ ವರೆಗಿನ ರಸ್ತೆಯ ಪಕ್ಕದಲ್ಲಿ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರ ಸಹಾಯಕ ಅಧಿಕಾರಿಗೆ ಪಟ್ಟಣ ಮಾರಾಟಗಾರರ ಸಮಿತಿ ಸದಸ್ಯ ಸಾಬಿರ ಅಲಿ ಅವರು ಮನವಿ ಸಲ್ಲಿಸಿದರು.
ಬುಟ್ಟಿಗಳಲ್ಲಿ ಹಣ್ಣುಹಂಪಲು, ಸೇರಿದಂತೆ ವಿವಿಧ ವಸ್ತುಗಳನ್ನು ಇಟ್ಟುಕೊಂಡು ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡಲು ಅವಕಾಶ ನೀಡಬೇಕು, ರಸ್ತೆ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಪ್ಯಾವಾರ ನಡೆಸುವ ಬೀದಿಬದಿ ವ್ಯಾಪಾರಿಗಳನ್ನು ಸಂಚಾರಿ ಪೊಲೀಸರು ಈ ಸ್ಥಳದಲ್ಲಿ ವ್ಯಾಪಾರ ನಡೆಸಲು ಅವಕಾಶ ನಿಡುತ್ತಿಲ್ಲ ಹೀಗಾಗಿ ಇವರ ಉಪಜೀವನಕ್ಕೆ ತೊಂದರೆಯಾಗುತ್ತಿದೆ.
ಬೆಸಿಗೆ ಪ್ರಾರಂಭವಾಗಿರುವುದರಿಂದ ಗಲ್ಲಿಗಲ್ಲಿ ತಿರುಗಾಡಿ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ, ಇಲ್ಲಿನ ರಸ್ತೆಯ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡಲು ಹಾಗೂ ತಳ್ಳುಬಂಡಿಗಳನ್ನು ಇಡಲು ಸೂಕ್ತ ಸ್ಥಳವನ್ನು ನೀಡಬೇಕು, ಉಚಿತವಾಗಿ ಛತ್ರಿಗಳನ್ನು ವಿತರಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಂತಪ್ಪ ಯಳವಾರ, ಮರೆಮ್ಮ ಕಲ್ಯಾಣಿ, ಸೋನಾಬೇಗಂ, ನಜ್ಮಾಬೇಗಂ, ಪ್ರಭಾವತಿ, ಸಿದ್ದರಾಮ ಭೈರಮಡಗಿ, ಪರಮೇಶ್ವರ ರಾಮಲಿಂಗಪ್ಪ ಸೇರಿದಂತೆ ಹಲವರಿದ್ದರು.