ರಸ್ತೆಯ ನಿಯಮ ಪಾಲಿಸಿ :ಅಕ್ಕೋಣೆ

ಕಲಬುರಗಿ:ಜ.14:ರಸ್ತೆಯ ನಿಯಮಗಳನ್ನು ಪಾಲಿಸದೆ ಅಡ್ಡದಿಡ್ಡಿಯಾಗಿ ಗಾಡಿ ಚಲಾಯಿಸುವುದರಿಂದ ಇಂದಿನ ದಿನಮಾನಗಳಲ್ಲಿ ರಸ್ತೆ ಅಪಘಾತದಲ್ಲಿ ಯುವ ಸಮೂಹ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ರಸ್ತೆ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಿದ್ದೆ ಆದರೆ ಯಾವುದೇ ಅಪಾಯಗಳು ಹಾಗೂ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಲು ಸಾಧ್ಯ ಆದ್ದರಿಂದ ರಸ್ತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಅಪ್ಪಾರಾವ ಅಕ್ಕೋಣೆಯುವರು ಕರೆ ನೀಡಿದರು.

ಕಲ್ಬುರ್ಗಿ ನಗರದ ಶ್ರೀ ವಿಶ್ವನಾಥ ರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದಲ್ಲಿ ಸಂಚಾರಿ ಪೆÇಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರ್ಗಿ ಜಿಲ್ಲಾ ಶಾಖೆ ಮತ್ತು ಶ್ರೀ ವಿಶ್ವನಾಥ ರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕದ ಸoಯುಕ್ತಾ ಶ್ರಯದಲ್ಲಿ ಹಮ್ಮಿಕೊಂಡ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯರಾದ ಶ್ರೀ ಹನುಮಂತ ಪ್ರಭು ಅವರು ಮಾತನಾಡಿ ವಿದ್ಯಾರ್ಥಿಗಳು ವಾಹನ ಚಲಿಸುವಾಗ ಸಂಚಾರ ನಿಯಮಗಳನ್ನು ಪಾಲಿಸುವುದು, ಅದನ್ನು ಚಾಚು ತಪ್ಪದೆ ಪಾಲಿಸಬೇಕು ಅಲ್ಲದೆ ನಮ್ಮನ್ನು ಅವಲಂಬಿಸಿದವರನ್ನು ಸ್ಮರಿಸಿ ಕೊಂಡು ವಾಹನವನ್ನು ಚಲಾಯಿಸಬೇಕು.ಎಂದು ಕಿವಿ ಮಾತು ಹೇಳಿದರು. ಸಂಚಾರಿ ಪೆÇಲೀಸ್ ವಿಭಾಗದ ಶ್ರೀ ರಾಜಕುಮಾರ ಕೋಬಾಳರವರು ರಸ್ತೆ ನಿಯಮಗಳ ಕುರಿತು ಸುದೀರ್ಘ ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಭಾಗ್ಯಲಕ್ಷ್ಮಿ ಯುವರೆಡ್ ಕ್ರಾಸ್ ಯೋಜನಾಧಿಕಾರಿಗಳಾದ ಶ್ರೀ ಧನರಾಜ್ ಬಾಸಗಿ ಅವರು ಮತ್ತು ವಿಶ್ವನಾಥ್ ರೆಡ್ಡಿ ಮುದ್ನಾಳ್ ರ ಪದವಿ ಮಹಾವಿದ್ಯಾಲಯದ ಆಡಳಿತ ಅಧಿಕಾರಿಗಳಾದ ಡಾ. ಬಸವರಾಜ ಮಠಪತಿ, ಪ್ರಾಚಾರ್ಯರಾದ ಡಾ.ಪ್ರೇಮಾ ಅಪ ಚಂದ ಹಾಗೂ ಕಾರ್ಯಕ್ರಮ ಅಧಿಕಾರಿಯಾದ ಶ್ರೀ ಅನಿಲ ಕುಮಾರ ಉಪಸ್ಥಿತರಿದ್ದರು.