ರಸ್ತೆಯ ತುಂಬಾ ತಗ್ಗು ಗುಂಡಿಗಳು ಕೆಸರು ಗದ್ದೆಯಾದ ಉಜ್ಜಯಿನಿ ರಸ್ತೆಗಳು

ಕೊಟ್ಟೂರು ಸೆ 16 : ತಾಲೂಕಿನ ಉಜ್ಜಿನಿಯಲ್ಲಿ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಜ್ಜಿನಿಯ ಹಲವು ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಟ್ಟಿವೆ.
ಉಜ್ಜಿನಿಯಿಂದ ಕೂಡ್ಲಿಗಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಗ್ಗುಗುಂಡಿಗಳು ತುಂಬಿದ್ದು, ಮಳೆಯಿಂದಾಗಿ ರಸ್ತೆ ಸಂಚಾರ ತಿವ್ರಾ ಹದಗೆಟ್ಟಿದೆ, ವಾಹನ ಸವಾರಾರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮುಖ್ಯ ರಸ್ತೆಯಲ್ಲದೆ ಗ್ರಾಮದ ಬೀದಿಗಳಲಿಯೂ ಸಹ ರಸ್ತೆಗಳಲ್ಲಿ ನೀರುನಿಂತು ಸರ್ವಾಜನಿಕರಿಗೆ ಕಿರಕಿರಿ ಉಂಟಾಗಿದೆ, ಸ್ವಲ್ಪ ಮಳೆಬಂದರೆ ಸಾಕು ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಡುತ್ತವೆ.
ಹಲವು ಬಾರಿ ಈ ಕುರಿತು ಸಂಭಂದಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ, ಕಂಡತು ಕಾಣದಂತೆ ಜಾಣ ಕುರುಡರಾಗಿದ್ದಾರೆ ಎಂದು ಗ್ರಾಮಸ್ತರು ಆರೋಪಿಸಿದರು.