ರಸ್ತೆಯೂ…ಒಳ ಚರಂಡಿ ಗುಂಡಿಯೂ..


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.26: ಸಾಮಾನ್ಯವಾಗಿ ರಸ್ತೆ ಮತ್ತು ಒಳ ಚರಂಡಿ ಗುಂಡಿಯ(ಮ್ಯಾನ್ ಹೋಲ್) ಮಟ್ಟ ಒಂದೇರೀತಿಯಲ್ಲಿರುತ್ತದೆ. ಕಾರಣ ವಾಹನ ಜನರ ಸಂಚಾರ  ಸುಗಮವಾಗಿರಲು.
ಬಹುತೇಕ ಕಡೆ ರಸ್ತೆ ಹಾಕಿದಾಗ ಒಂದಿಷ್ಟು ಕೆಳ‌ಮಟ್ಟದಲ್ಲೂ ಇರುತ್ತವೆ. ಅವನ್ನು ರಸ್ತೆ ಮಟ್ಟಕ್ಕೆ ಹೆಚ್ಚಿಸಲಾಗುತ್ತದೆ.
ಆದರೆ ರಸ್ತೆ ಮಟ್ಟಕ್ಕಿಂತ ಒಂದು ಅಡಿ ಎತ್ತರದಲ್ಲಿ ನಿರ್ಮಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಅದೂ ಕಾಂಕ್ರೀಟ್ ರಸ್ರೆಯಲ್ಲಿ.
ಇದು ಕಂಡು ಬರುವುದು.  ಇಲ್ಲಿನ ವಾರ್ಡ್ ನಂಬರ್ 17 ಹನುಮಾನ್ ನಗರದ  ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ಎದುರುಗಡೆ ರಸ್ತೆಯಲ್ಲಿ.  ಕಳೆದ  ಒಂದು ತಿಂಗಳ ಹಿಂದೆ ಇಲ್ಲಿನ  ಮೂರು ಬೀದಿ ಯಲ್ಲಿ ಸಿಸಿ ರಸ್ತೆಯನ್ನು ಹಾಕಿದ್ದಾರೆ ಪಾಲಿಕೆಯವರು.  ರಸ್ತೆ ಮಧ್ಯಭಾಗದಲ್ಲಿ ಡ್ರೈನೇಜ್  ಚೇಂಬರನ್ನು ಕಟ್ಟಿದ್ದಾರೆ ಅದು ರಸ್ತೆಗಿಂತ 1 ಅಡಿ ಎತ್ತರ ಇದೆ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ, ಆಟೋ ಬಿಟ್ಟರೆ ಕಾರುಗಳ ಸಂಚಾರ ದುಸ್ತರ.  ಅದಕ್ಕಾಗಿ ರಸ್ತೆ ಮಟ್ಟಕ್ಕೆ ಸರಿಪಡಿಸಲು ಇಲ್ಲಿನ ಜನತೆ ಕೋರಿದ್ದಾರೆ.