ರಸ್ತೆಯಲ್ಲೇ ಮಲಗಿದ ಕೋವಿಡ್ ರೋಗಿ…

ಬೆಂಗಳೂರು, ಏ.13- ಕೋವಿಡ್ ಎರಡನೇ ಅಲೆ ತೀವ್ರ ವೇಗ ಬೆಂಗಳೂರಿನಲ್ಲಿ
ಪಡೆದುಕೊಂಡಿರುವ ನಡುವೆ ಕೋವಿಡ್ ರೋಗಿಗೆ ಚಿಕಿತ್ಸೆಗೆ ಪರದಾಡಿ ಪಾದಚಾರಿ ರಸ್ತೆಯಲ್ಲೇ ಮಲಗಿರುವ ಆರೋಪ ಕೇಳಿಬಂದಿದೆ.

ಭಾನುವಾರ 58 ವರ್ಷದ ಮಹಿಳೆಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.ನಿನ್ನೆ (ಸೋಮವಾರ) ಮಹಿಳೆಗೆ ಸೋಂಕು ದೃಢಪಟ್ಟಿದೆ. ಆದರೆ, ಇಂದು ಡಯಾಲಿಸಿಸ್​ಗಾಗಿ ಇಲ್ಲಿನ ಮಲ್ಯ ಆಸ್ಪತ್ರೆಗೆ ತೆರಳಿದಾಗ, ಆಕೆಯನ್ನು ದಿಢೀರ್ ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರಶ್ನಿಸಿದರೆ ಈ ಆಸ್ಪತ್ರೆ ಕೋವಿಡ್ ರಹಿತ ರೋಗಿಗಳಿಗಾಗಿ ಇದೆ ಸಾಬಾಬು ಹೇಳಲಾಗಿದೆ.ತದನಂತರ, ಸೋಂಕಿತ ಮಹಿಳೆ ಪಾದಚಾರಿ ರಸ್ತೆಯಲ್ಲೇ ಮಲಗಿದ್ದು, ಈ ದೃಶ್ಯ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಮತ್ತೆ ಹಾಸಿಗೆ ಕೊರತೆ ಎದ್ದು ಕಾಣುತ್ತಿರುವುದೇ ಇದಕ್ಕೆ ಕಾರಣ ಎಂದು ಹಲವಾರು ದೂರಿದ್ದಾರೆ.