ರಸ್ತೆಬದಿ ಮರಗಳಿಗೆ ಬೆಂಕಿ:ಪ್ರಕರಣ ದಾಖಲು

ಮಾನ್ವಿ.ಮೇ.೦೪-ತಾಲೂಕಿನ ಕಪಗಲ್ ಕ್ರಾಸ್‌ನಿಂದ ಮಂತ್ರಾಲಯಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದ ಸರ್ವೆ ನಂ ೪೭ ಜಗದೀಶ ಗೌಡ ಎಂಬಾತನ ಹೊಲದಲ್ಲಿದ್ದ ಸುಮಾರು ಇಪ್ಪತ್ತು ಮೂವತ್ತು ವರ್ಷದ ಸುಮಾರು ಐದಾರು ಮರಗಳಿಗೆ ಬೆಂಕಿ ಇಟ್ಟ ಪರಿಣಾಮ ಮರಗಳನ್ನು ಸುಟ್ಟು ಕಡಿಯಲೆತ್ನಿಸಿದ್ದಾನೆ.
ಹೊಲದ ಮಾಲೀಕ ಜಗದೀಶ ಗೌಡ ಬೆಟ್ಟದ್ದೂರು ಗ್ರಾಮದ ನಿವಾಸಿ ತಮ್ಮ ಹೊಲದಲ್ಲಿ ಬೆಳೆದಿದ್ದ ಸುಮಾರು ವರ್ಷಗಳಿಂದ ದಾರಿ ಹೋಕರರಿಗೆ ನೆರಳಾಗಿದ್ದ ಫೆಲೋ ಪಾರಂ ಮರಗಳಿಗೆ ಅನಧಿಕೃತವಾಗಿ ಹಾಗೂ ಉದ್ದೇಶ ಪೂರ್ವಕಾವಾಗಿ ಮರವನ್ನು ಕೆಡವಲು ಬೆಂಕಿ ಹಾಕಿ ಮರಗಳ ಮಾರಣ ಹೋಮಿಗೆ ಕಾರಣರಾಗಿದ್ದಾನೆ.
ಸುಮಾರು ವರ್ಷಗಳಿಂದ ಮಂತ್ರಾಲಯಕ್ಕೆ ಹೋಗುವ ಅನೇಕ ಭಕ್ತರಿಗೆ ಹಾಗೂ ಅ ಭಾಗದ ಊರುಗಳಿಗೆ ಹೋಗುವ ಜನರಿಗೆ ಶಾಲಾ ಮಕ್ಕಳಿಗೆ ಅನೇಕ ವರ್ಷಗಳ ಕಾಲ ಇವೇ ಮರಗಳು ಆಸರೆಯಾಗಿದ್ದ ಮರಗಳು ಇಂದು ಸುಟ್ಟು ಕರಕಲಾಗಿ ಒಣಗಿ ಸಾಯುತ್ತಿವೆ.
ಘಟನಾ ಸ್ಥಳಕ್ಕೆ ತಾಲೂಕ ಅರಣ್ಯಧಿಕಾರಿ ರಾಜೇಶ್ ನಾಯಕ ಭೇಟಿ ನೀಡಿ ಹೆಚ್.ಎಂ ಬಾಬು ಭಾರತೀಯಾ ಸೇವಾ ಸಮಿತಿ ರಾಜ್ಯಧ್ಯಕ್ಷರು ಕಾರ್ಮಿಕ ಸಂಘಟನೆ ಅವರ ದೂರಿನ ಅನ್ವಯ ಫೆಲೋ ಪಾರಂ ಮರದ ಕಟ್ಟಿಗೆಗಳನ್ನು ಇಲಾಖೆಯ ವಶಕ್ಕೆ ಪಡೆದುಕೊಂಡು ಪ್ರಕರಣದ ರೂವಾರಿ ಜಗದೀಶ ಗೌಡನ ಮೇಲೆ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.