ರಸ್ತೆದುರಸ್ತಿ ಕಾಮಗಾರಿಗೆ ಅನಿಲ್ ಕುಮಾರ್ ಚಾಲನೆ

ಕೋಲಾರ,ಮಾ,೫-ತಾಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕುರುಗಲ್ ಸಮೀಪದ ಸಿಂಗೆಹಳ್ಳಿ ಕೆರೆಯ ಕಾಲುವೆ ಮತ್ತು ಕೆರೆಯ ಅಚ್ಚು ಕಟ್ಟು ರಸ್ತೆ ದುರಸ್ತಿ ಕಾಮಗಾರಿಗೆ ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಅಂದಾಜು ೫೦.೦೦ಲಕ್ಷ ರೂಗಳು ಮಂಜೂರು ಮಾಡಿಸಿರುವ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದಯಾನಂದ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ.ರಮೇಶ್, ಮುಖಂಡರಾದ ಪರ್ಜೆನಹಳ್ಳಿ ನಾಗೇಶ್, ಕುರುಗಲ್ ಪಾಪಣ್ಣ, ಮಂಜುನಾಥ್, ತೋರಣಕಂಬದಹಳ್ಳಿ ನಾರಾಯಣ ಸ್ವಾಮಿ, ಜಗನ್, ವಾಸಿಮ್, ಕುರುಗಲ್ ರಮೇಶ್, ಮಂಜು ಇದ್ದರು.