ರಸ್ತೆಗೆ ಹರಿಯುತ್ತಿರುವ ಚರಂಡಿ ನೀರು

ವಾಡಿ: ಆ.6: ಸೂಕ್ತ ನಿರ್ವಹಣೆ ಕೊರತೆ ಮತ್ತು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಕು ನೀರು ರಸ್ತೆಗೆ ಹರಿದಾಡುತ್ತಿದ್ದು, ಜನರು ಅಸ್ವಚ್ಛ ನೀರಿನಲ್ಲಿಯೇ ನಡೆದಾಡುವ ಪರಿಸ್ಥಿತಿ ಎದುರಾಗಿದೆ.

ಶಹಾಬಾದ ತಾಲ್ಲೂಕಿನ ರಾವೂರ ಗ್ರಾಮದ ಭಗೀರಥ ಚೌಕಿನ ರಸ್ತೆಯ ಮಧ್ಯೆದಲ್ಲಿ ಚರಂಡಿ ನೀರು ಸಂಗ್ರಹಣೆಯಾಗಿ ಜನರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ರಸ್ತೆಯು ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠಕ್ಕೆ ಹಾಗೂ ಮುಖ್ಯ ಮಾರುಕಟ್ಟೆಗೆ ಹೋಗುವ ರಸ್ತೆ ಇದಾಗಿದೆ. ನಿತ್ಯ ನೂರಾರು ಜನರ ಓಡಾಟ, ವಾಹನ ಸಂಚಾರವಿದೆ. ಇಲ್ಲಿಂದ ಸಂಚರಿಸುವ ಶಾಲಾ ಮಕ್ಕಳು ಕೊಳಕು ನೀರಿನಲ್ಲಿಯೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಮಕ್ಕಳ ಪೋಷಕರು.

ಭಗೀರಥ ವೃತ್ತದಲ್ಲಿ ಚರಂಡಿ ನೀರು ಜಮಾವಣೆ ಆಗುತ್ತಿದೆ. ಮಳೆಗಾಲ ಇರುವುದರಿಂದ ಹೆಚ್ಚಿನ ನೀರು ಸಂಗ್ರಹಣೆ ಆಗುತ್ತಿದೆ. ಈ ಕುರಿತು ಗ್ರಾಮ ಪಂಚಾಯತ ಅಧ್ಯಕ್ಷರ ಹಾಗೂ ಪಿಡಿಓ ಗಮನಕ್ಕೆ ತರಲಾಗಿದೆ. ಸಮಸ್ಯೆ ಬಗೆಹರೆದಿಲ್ಲ. ಮೇಲಾಧಿಕಾರಿಗಳು ಇತ್ತ ಗಮನ ಹರಿಸಬೇಕು.

ನಾಗೇಂದ್ರ ಜಡಿ. ಕ.g.Àವೇ ಶಹಾಬಾದ ತಾಲ್ಲೂಕ ಕಾರ್ಯದರ್ಶಿ.