ರಸ್ತೆಗೆ ಬ್ಲೀಚಿಂಗ್ ಪೌಡರ್ : ಸ್ಲಂ ಬಾಯಿಗೆ ಮಣ್ಣು

ಪುರಸಭೆ ಅಧಿಕಾರಿಗಳ ಬೇಜವಬ್ದಾರಿ
ದುರುಗಪ್ಪ ಹೊಸಮನಿ
ಲಿಂಗಸುಗೂರು.ಮೇ.೧೭-ಸ್ಥಳೀಯ ಪುರಸಭೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಓಲೈಕೆ ಮಾಡಲು ಡಾಂಬಾರು ರಸ್ತೆಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದು, ಆದರೆ ದುರ್ನಾತ ಹೊಡೆಯುತ್ತಿರುವ ಸ್ಲಂಗಳ ಬಾಯಿಗೆ ಮಣ್ಣು ಹಾಕಿದಂತಾಗಿದೆ.
ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದರಿಂದ ಇದರ ನಿಯಂತ್ರಣಕ್ಕಾಗಿ ಪುರಸಭೆ ಅಧಿಕಾರಿಗಳು ಮುಂದಾಗಬೇಕಿತ್ತು. ಆದರೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಾಲೂಕು ಆಸ್ಪತ್ರೆಗೆ ಬೇಟಿ ನೀಡುತ್ತಿದ್ದಾರೆ. ಅದುಲ್ಲದೆ ರಾಯಚೂರಿಗೆ ತೆರಳುತ್ತಿದ್ದರಿಂದ ಬಸ್ ನಿಲ್ದಾಣ ವೃತ್ತದಿಂದ ಭಗೀರಥ ಕಾಲೋನಿವರಿಗೆ ರಸ್ತೆಗೆ ಗುಂಟ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದಾರೆ. ಇದು ಸಚಿವರು ಆಗಮಿಸುತ್ತಿದ್ದಾರೆಂದು ಬ್ಲೀಚಿಂಗ್ ಪೌಡರ್ ಹಾಕಿದ್ದಾರೆ ವಿನಾಃ ಕೊರೊನಾ ಸೊಂಕು ಹರಡುತ್ತಿದ್ದರೂ ಇದರ ನಿಯಂತ್ರಣಕ್ಕಾಗಿ ಅಲ್ಲ ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಲಂಗಳ ಬಾಯಿಗೆ ಮಣ್ಣು :
ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸೊಂಕಿತ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಇದರ ನಿಯಂತ್ರಣಕ್ಕಾಗಿ ಎಲ್ಲಾ ವಾರ್ಡಗಳಿಗೆ ಸ್ಯಾನಿಟೈಸರ್ ಮಾಡುವಂತೆ ಶಾಸಕ ಡಿ.ಎಸ್.ಹೂಲಗೇರಿ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೆ ಕೇವಲ ಸೊಂಕಿತರ ಮನೆಯ ಬಳಿ ಅಷ್ಟೇ ಸ್ಯಾನಿಟೈಸರ್ ಮಾಡಿದ್ದು ಬಿಟ್ಟುರ ಇನ್ನುಳಿದ ವಾರ್ಡಗಳಿಗೆ ಸ್ಯಾನಿಟೈಸರ್ ಮಾಡಿಸುವತ್ತ ಮುಖ್ಯಾಧಿಕಾರಿಗಳ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದರಿಂದ ಕೊರೊನಾ ನಿಯಂತ್ರಣಕ್ಕೆ ಬಾರದಾಗಿದೆ. ಇದುಲ್ಲದೆ ಕರಡಕಲ್, ಗೌಳಿಪುರ, ೫ನೇ ವಾರ್ಡ, ೭ನೇ ಸೇರಿದಂತೆ ಇನ್ನಿತರ ಕಡೆಗಳಲ್ಲಿರುವ ಸ್ಲಂ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೊಳಚೆ ಪ್ರದೇಶದಲ್ಲೇ ಜನ ನಿತ್ಯವೂ ವಾಸ ಮಾಡುವಂತಹ ದುಸ್ಥಿತಿ ಬಂದೊಗಿದೆ. ಇದುಲ್ಲದೆ ಸಾಂಕ್ರಾಮಿಕ ರೋಗಗಳ ಹರಡುತ್ತಿದ್ದರೂ ಅಲ್ಲಿ ಬ್ಲೀಚಿಂಗ್ ಪೌಡರ್ ಆಗಲಿ ಸ್ಯಾನಿಟೈಸರ್ ಮಾಡಿಸುವತ್ತು ಪುರಸಭೆ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ, ಇದರಿಂದ ಅಲ್ಲಿನ ಜನ ಪರದಾಡುವಂತಾಗಿದೆ. ಸ್ಲಂನಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡಬೇಕಾದ ಪುರಸಭೆ ಅಧಿಕಾರಿಗಳು ಮುಖ್ಯ ರಸ್ತೆಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲು ಆಸಕ್ತಿ ತೋರುತ್ತಿದ್ದಾರೆ.
ದಂಡ ವಸೂಲಿಗೆ ಆಸಕ್ತಿ :
ಪಟ್ಟಣದ ಜನತೆ ಆರೋಗ್ಯದ ಜೊತೆ ನೈರ್ಮಲ್ಯ ಕಾಪಾಡುವ ಮಹತ್ವದ ಜವಬ್ದಾರಿಯಿರುವ ಪುರಸಭೆ ಅಧಿಕಾರಿಗಳು ಇದನ್ನು ಮೆರತು ಅನಗತ್ಯ ತಿರುಗಾಡುವವರನ್ನು ಹಿಡಿದು ೧೦೦ ರೂ ದಂಡ ವಸೂಲಿಗೆ ಇಡೀ ಪುರಸಭೆ ಅಧಿಕಾರಿಗಳನ್ನೇ ನಿಯೋಜನೆ ಮಾಡಿದ್ದಾರೆ. ದಂಡ ವಸೂಲಿಗೆ ಆಸಕ್ತಿ ತೋರುತ್ತಿರುವ ಪುರಸಭೆ ಅಧಿಕಾರಿಗಳು ಸ್ಲಂ ಪ್ರದೇಶಗಳ ಜನರ ಬಾಯಿಗೆ ಮಣ್ಣು ಹಾಕಿದಂತಾಗಿದೆ.
ಕೊರೊನಾ ಸೊಂಕು ನಿಯಂತ್ರಣಕ್ಕಾಗಿ ಎಲ್ಲಾ ವಾರ್ಡಗಳಲ್ಲಿ ಸ್ಯಾನಿಟೈಸರ್ ಮಾಡಿಸಬೇಕಾದ ಅಗತ್ಯ ಇದ್ದರೂ ಇದಕ್ಕೆ ಪುರಸಭೆ ಆಡಳಿತ ಮಂಡಳಿ ಕಾಳಜಿವಹಿಸಬೇಕಾದ ಅನಿವಾರ್ಯತೆ ಇದೆ.