ರಸ್ತೆಗೆ ಬಿದ್ದ ದೊಡ್ಡಮರ, ವಾಹನಸಂಚಾರಕ್ಕೆ ಅಡ್ಡಿ, ತೆರವಿಗೆ ಮನವಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.8 :- ಪಟ್ಟಣದ ಹೊಸಪೇಟೆ ರಸ್ತೆಯ ರಾಜೀವಗಾಂಧಿ ನಗರದ  ಸಮೀಪದ ಹೈವೇ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ದೊಡ್ಡದಾದ ಮರವೊಂದು ಮಳೆಗಾಳಿಗೆ ಮೂರುದಿನದ ಹಿಂದೆ  ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗಿದ್ದು ಬೇಗನೆ ಮರವನ್ನು ತೆರವುಗೊಳಿಸಿ ವಾಹನಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಟ್ಟಣದ ಕಾಂಗ್ರೆಸ್ ಯುವಮುಖಂಡ ದುರ್ಗೇಶ್, ಕಾಲ್ಚಟ್ಟಿ ಕೃಷ್ಣ ಸೇರಿದಂತೆ ಅನೇಕರು ಸಂಬಂದಿಸಿದ ಇಲಾಖೆಗೆ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಸುರಿದ ಮಳೆಗಾಳಿಯಿಂದ ನೆಲಕ್ಕುರುಳಿದ ದೊಡ್ಡದಾದ ಮರ ಬಿದ್ದು ಮೂರ್ನಾಕು ದಿನವಾಗಿದೆ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿರುವುದಲ್ಲದೆ ಬಿದ್ದ ಮರದಲ್ಲಿ  ವಿದ್ಯುತ್ ತಂತಿಗಳು ಸಹ ಸುತ್ತಿಕೊಂಡು ಹರಿದುಬಿದ್ದಿವೆ ಕೆಲವರು ವಿದ್ಯುತ್ ತಂತಿ ಅದರಲ್ಲಿದ್ದರಿಂದ ಆ ಮರದ ಹತ್ತಿರ ಹೋಗಲು ಸಹ ಭಯಭೀತರಾಗಿದ್ದಾರೆ ಅರಣ್ಯ ಇಲಾಖೆ ಸೇರಿದಂತೆ ಸಂಬಂದಿಸಿದ ಇಲಾಖೆ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪತ್ರಿಕೆ ಮೂಲಕ ರಾಜೀವಗಾಂಧಿ ನಗರದ ಜನತೆ ಹಾಗೂ ಕೂಡ್ಲಿಗಿ ಪಟ್ಟಣದ ಸಂಘಸಂಸ್ಥೆ ಪದಾಧಿಕಾರಿಗಳು  ಮನವಿ ಮಾಡಿದ್ದಾರೆ.