ರಸ್ತೆಗಿಳಿದ ಪಿಎಸ್‍ಐ ಮತ್ತು ಪೊಲೀಸರು

ಆಲಮೇಲ:ಎ.30:ಕರೋನಾ ಸರಪಳಿಯನ್ನು ಕತ್ತಿರಿಸಲು ರಾಜ್ಯ ಸರಕಾರ ಲಾಕ್ ಡೌನ್ ಜಾರಿಗೆ ತಂದರು ಮಧ್ಯಾಹ್ನದ ವೇಳೆ ಪಟ್ಟಣದ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದರಿಂದ ಪೊಲೀಸರು ಬೀಗಿ ಕ್ರಮ ತೆಗೆದುಕೊಂಡು ಅವರನ್ನು ಮನೆಯಲ್ಲಿ ಲಾಕ್ ಮಾಡಿದರೂ, ಆಲಮೆಲ ಪಿಎಸ್‍ಐ ಸುರೇಶ ಗಡ್ಡಿ, ಎಎಸ್‍ಐ ಎಮ್.ಆರ್.ಕೆಂಚಗಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಮುಂಜಾನೆ 10 ಗಂಟೆಯ ನಂತರ ರಸ್ತೆಗೆ ಇಳಿದು ಅನಗತ್ಯವಾಗಿ ಓಡಾಡುವರಿಗೆ ಲಾಠಿ ರುಚಿ ತೋರಿಸುವ ಮೂಲಕ ಕರ್ತವ್ಯ ಮೇರೆದಿದ್ದಾರೆ.

     ಆಲಮೇಲ ಪಟ್ಟಣ ಸಿಂದಗಿ, ಇಂಡಿ, ಅಫಜಲಪೂರ, ಸೋಲ್ಲಾಪೂರ, ವಿಜಯಪೂರ ಸೇರಿದಂತೆ ಇತರೆ ಕಡೆ ಹೋಗಲು ಕೇಂದ್ರ ಸ್ಥಾನವಾಗಿದ್ದು ಇಲ್ಲಿಯಿಂದ ಸಾಕಷ್ಟು ಜನರು ಹೋಗಬೇಕು, ಮದುವೆ ಹಾಗೂ ಮರಣ ಸುದ್ದಿಗಳಿಗೆ ಹೋಗುವ ವಾಹನಗಳಿಗೆ ಪೋಲಿಸರು ತಪಾಸಣೆ ಮಾಡಿ, ಬೇಕಾ ಬಿಟ್ಟಿ ಜನರು ತುಂಬಿದವರಿಗೆ ಕಾನೂನು ಕ್ರಮ ಜರುಗಿಸಿ ದಂಡ ಕಟ್ಟಿ ವಾಹನಗಳು ವಶಕ್ಕೆ ಪಡೆದು ಕೇಸ್ ಹಾಕಿದ್ದಾರೆ ಇದರಿಂದ ಮಧ್ಯಾಹ್ನದಿಂದ ಯಾರು ಬೇಕಾಬಿಟ್ಟಿ ಓಡಾಡುವದು ಬ್ರೇಕ್ ಹಾಕಿದಂತಾಗಿತ್ತು ಜನರು ಪೊಲೀಸರಿಗೆ ಹೆದರಿ ಮನೆಗೆ ಸೇರಿದರೂ ಆದ್ದರಿಂದಪಟ್ಟಣ ಬಸ್ ನಿಲ್ದಾಣ ಸೇರಿ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು .