ರಸ್ತೆಗಿಳಿದ ಐರಾವತ…

ಹುಬ್ಬಳ್ಳಿ ಏ 20 – ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ ಹದಿನಾಲ್ಕು ದಿನಗಳಿಂದ ಡಿಪೆÇೀ ಸೇರಿಕೊಂಡಿದ್ದ ಐರಾವತ ಬಸ್ಸು ಇಂದು ಮತ್ತೆ ರಸ್ತೆಗಿಳಿದು ಸಂಚಾರ ಆರಂಭಿಸಿದೆ ಎಂದು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದರು.
ಮುಷ್ಕರ ಆರಂಭವಾದಾಗಿನಿಂದ ಬಸ್ ಸಂಚಾರ ನಿಧಾನವಾಗಿ ನಡೆದಿತ್ತದಾರೂ ಸುರಕ್ಷತೆಯ ದೃಷ್ಟಿಯಿಂದ ಐರಾವತ ಬಸ್ಸುಗಳನ್ನು ಕಾರ್ಯಾಚರಣೆ ಮಾಡಿರಲಿಲ್ಲ. ಇದೀಗ ಪರಿಸ್ಥಿತಿ ಸಹಜಸ್ಥಿತಿಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವೋಲ್ವೊ ಬಸ್ಸುಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದ್ದು, ಐರಾವತ ಬಸ್ಸ ನ್ನು ಹುಬ್ಬಳ್ಳಿಯಿಂದ ಬೆಳಗಾವಿಗೆ ಸಂಚಾರ ಆರಂಭಿಸಿತು.
ಗ್ರಾಮಾಂತರ ಹಾಗೂ ನಗರ ವಿಭಾಗದ ಡಿಪೆÇೀಗಳಿಂದ ಇಂದು ಸುಮಾರು 200 ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತಿವೆ ಎಂದ ಅವರು ಮದ್ಯಾಹ್ನದ ನಂತರ ಬಸ್ಸುಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಲಾಗುವುದು ಎಂದರು.
ಈ ವೇಳೆ ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್.ಮುಜುಂದಾರ, ಭದ್ರತಾ ಮತ್ತು ಜಾಗೃತಾಧಿಕಾರಿ ದೊಡ್ಡಲಿಂಗಣ್ಣವರ ಉಪಸ್ಥಿತಿಯಲ್ಲಿ ಘಟಕದ ಅಧಿಕಾರಿಗಳು ಬಸ್ ಕಾರ್ಯಾಚರಣೆ ಮಾಡಿದರು.