ರಸ್ತೆಗಿಳಿದರೆ ದಂಡದ ಎಚ್ಚರಿಕೆ

ಜಗಳೂರು. ಏ.೩೦;  ಡಿ.ವೈ.ಎಸ್.ಪಿ ನರಸಿಂಹ ವಿ ತಾಮ್ರಧ್ವಜ  ಜಗಳೂರಿನಲ್ಲಿ ಸಾರ್ವಜನಿಕರಿಗೆ ಕೋರೋನ  ವೈರಸ್ ಬಗ್ಗೆ ಜಾಗೃತಿ ಮತ್ತು ಮಾಸ್ಕ್ ವಿತರಣೆ ಮಾಡಿದರು.ಪಟ್ಟಣದ ಜೆ.ಸಿ.ಆರ್ ಬಡಾವಣೆಯ ದುರ್ಗಾಂಬಿಕ ದೇವಸ್ಥಾನದ ಹತ್ತಿರ ಇಂದು ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮತ್ತು ಅಪರಾಧ ತಡೆ ಮತ್ತು ಮಾಸಾಚರಣೆ ಮಾಡಲಾಯಿತು ನಂತರ ಡಿ.ವೈ.ಎಸ್.ಪಿ ನರಸಿಂಹ ವಿ ತಾಮ್ರಧ್ವಜ ಮಾತನಾಡಿ ಸಾರ್ವಜನಿಕರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮವಾದ ಆಹಾರಗಳನ್ನು ತೆಗೆದುಕೊಳ್ಳಬೇಕು ದಿನನಿತ್ಯ ಯೋಗಾ ಧ್ಯಾನ ವ್ಯಾಯಾಮ ಭ್ಯಾಸ ಮಾಡಬೇಕು ಹೀಗೆ ಮಾಡುವುದರಿಂದ ಕೊರೋನ ವೈರಸ್ ಗೆ ನಮ್ಮ ದೇಹದಲ್ಲಿ ರಕ್ಷಣೆಯಲ್ಲಿ ಸಿಗುತ್ತೆ ಎಂದರು.  ವೃತ್ತ ನಿರೀಕ್ಷಕರಾದ ಮಂಜುನಾಥ ಪಂಡಿತ್ ಮಾತನಾಡಿ ಇಂದು ನಮ್ಮ ತಾಲೂಕಿಗೆ ನಮ್ಮ ಪೊಲೀಸ್ ಇಲಾಖೆಯ ಡಿ.ವೈ.ಎಸ್.ಪಿ  ನರಸಿಂಹ ತಾಮ್ರ ಧ್ವಜ  ಬಂದಿರುವುದು ನಮಗೆ ತುಂಬಾ ಸಂತೋಷ ನಮ್ಮ ತಾಲೂಕಿನ ಜನರಿಗೆ ಕೊರೋನ ವೈರಸ್ ಬಗ್ಗೆ ಜಾಗೃತಿ ಮತ್ತು ಸಾರ್ವಜನಿಕರಿಗೆ ಮಾಸ್ಕ್  ವಿತರಣೆ ಕಾರ್ಯಕ್ರಮವನ್ನು ಮಾಡಿದ್ದರೆ ಅವರು ತಿಳಿಸಿದಂತೆ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಸಾಮಾಜಿಕ ಅಂತರ ಪ್ರತಿ ಅರ್ಧಗಂಟೆಗೊಮ್ಮೆ ಆದರೂ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈ ತೊಳೆಯಬೇಕು ಅನವಶ್ಯಕವಾಗಿ ಯಾರು ರಸ್ತೆಗಿಳಿದು ಹೊರಾಡಬಾರದು 14 ದಿನಗಳ ಕಾಲ ಸಂಪೂರ್ಣ ಪಟ್ಟಣ ಲಾಕ್ಡೌನ್ ಆಗಿರುತ್ತದೆ ನಿಮಗೇನಾದರೂ ಅಗತ್ಯ ವಸ್ತುಗಳು ಬೇಕಾದಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ನಮ್ಮ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು ಉಪ ನಿರೀಕ್ಷಕರಾದ ಸಂತೋಷ್ಬಾಗೋಜೀ ಮಾತನಾಡಿ ಕೋವಿಡ್-19  ವೈರಸ್ಸಿನಿಂದ ಇಡೀ ರಾಜ್ಯಾದ್ಯಂತ ಈ ವೈರಸ್ ಎಗ್ಗಿಲ್ಲದೆ ಅಟ್ಟಹಾಸ ಮೆರೆಯುತ್ತದೆ ಹಾಗಾಗಿ ನಮ್ಮ ಪೊಲೀಸ್ ಇಲಾಖೆ ಪಂಚಾಯತಿ ವತಿಯಿಂದ ಜಗಳೂರು ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಮುಂಜಾಗ್ರತೆಯಾಗಿ ಮನೆಯಲ್ಲಿರಬೇಕು ಎಂದರು.ಈ ಸಂದರ್ಭದಲ್ಲಿ ಎ.ಎಸ್.ಐ ಚಂದ್ರಶೇಖರ್  ನಾಗರಾಜ್ ಪೊಲೀಸ್ ಸಿಬ್ಬಂದಿಗಳಾದ 
ಶಂಸುದ್ದೀನ್ ವಿಜಯಕುಮಾರ್. ಚೈತ್ರ.ಪ್ರಸನ್ನ. ಮಾರಪ್ಪ  ರಮೇಶ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು