ರಸ್ತೆಗಳ ನಿರ್ಮಾಣಕ್ಕೆ ತಡೆಹಾಕಿಲ್ಲ:ದೇವೇಂದ್ರಪ್ಪ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 25:  ಸಂಡೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಕಾರ್ತಿಕ್ ಘೋರ್ಪಡೆಯವರ ಕನಸಿನ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದೇವೆ ವಿನಹ: ರಸ್ತೆ ನಿರ್ಮಾಣಕ್ಕೆ ತಡೆ ಮಾಡಿಲ್ಲ, ಅದರೆ ಶಾಸಕ ಈ.ತುಕರಾಂ ಅವರು ಸುಳ್ಳು ಹೇಳುವ ಮೂಲಕ ಸಂಸದ ದೇವೇಂದ್ರಪ್ಪನವರು ತಡೆಮಾಡಿದ್ದಾರೆ ಎಂದು ಜನರಿಗೆ ಸುಳ್ಳು ಹೇಳಿದ್ದಾರೆ ಇದರಿಂದ ನಾನು ತಡೆ ಹಾಕಿದ್ದರೆ ನನಗೆ ಅನ್ನ ಇಲ್ಲದಂತಾಗಲಿ, ಅವರು ಸುಳ್ಳು ಹೇಳಿದ್ದರೆ ಅವರಿಗೆ ಅನ್ನ ಇಲ್ಲದಂತಾಗಲಿ, ನಾವು ತಡೆಯುವವರಲ್ಲ, ಮಾಡುವವರು ಎಂದು ಸಂಸದ ವೈ.ದೇವೇಂದ್ರಪ್ಪ ಖಾರವಾಗಿ ನುಡಿದರು.
ಅವರು ಪಟ್ಟಣದ ಕಾರ್ತಿಕ್ ಘೋರ್ಪಡೆ ಮನೆಯ ಅವರಣದಲ್ಲಿ ರಾಜ್ಯ ಬಿಜೆಪಿ ಎಸ್ಟಿ.ಮೋರ್ಚಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಎಂದೂ ಸಹ ಬಿಜೆಪಿ ಪಕ್ಷ ಅಭಿವೃದ್ದಿಯನ್ನು ತಡೆದಿಲ್ಲ, ಪ್ರಗತಿಯೇ ನಮ್ಮ ಗುರಿ, ಸಂಡೂರಿನ ಸಮಗ್ರ ರೈತರಿಗೆ ಅನುಕೂಲವಾಗಲೆಂದು ಎಲ್ಲಾ ಕೆರೆಗಳಿಗೆ ನೀರುತುಂಬಿಸುತ್ತಿದ್ದೇವೆ, ಪ್ರತಿ ಮನೆಗೆ ಜಲ ಜೀವನ್ ಯೋಜನೆ, ರೈತರ ಖಾತೆಗೆ ನೇರ ಹಣ ಹೀಗೆ ಹತ್ತು ಹಲವು ಯೋಜನೆ ಮಾಡಿದ್ದೇವೆ, ಶಾಸಕರು ಸುಳ್ಳು ಹೇಳುವುದನ್ನು ಬಿಡಬೇಕು, ಸತ್ಯದಿಂದ ಅಭಿವೃದ್ದಿ ಮಾಡಿ ಎಂದರು.
ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಮುರಾರಿಗೌಡ್ ಉದ್ಘಾಟಿಸಿ ಮಾತನಾಢಿ ಸಂಘಟನಾತ್ಮಕ ಪಕ್ಷ ಇಂದು ಬೆಳೆದು ನಿಂತಿದೆ, ಪಕ್ಷ ಯಾರಿಗೆ ಟಿಕೇಟ್ ನೀಡಿದರು ಸರಿ, ಅದರೆ ನಮ್ಮ ಮತ ಕಮಲಕ್ಕೆ ಇರಲಿ, ಕಾರಣ 3 ಬಾರಿ ಶಾಸಕರಾದರೂ ಸಹ ಯಾವುದೇ ಅಭಿವೃದ್ದಿ ಇಲ್ಲವಾಗಿದೆ, ದೇಶದಲ್ಲಿ ಕಾಂಗ್ರೇಸ್ ಇಲ್ಲವಾಗಿದೆ, ಸಂಡೂರಿನಲ್ಲಿ ಈ ಬಾರಿ ಇಲ್ಲವಾಗಲಿದೆ ನಮ್ಮ ಯೋಜನೆ ಯಾರ ಪರವಾಗಿಯೂ ಇಲ್ಲ, ಸಮಗ್ರ ಅಭಿವೃದ್ದಿಗೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಕೆ.ಎಸ್.ದಿವಾಕರ ಮಾತನಾಡಿ ರಾಜ್ಯದಲ್ಲಿ ಎಸ್ಟಿ ಜನಾಂಗ ಕುಲಗುರು ವಾಲ್ಮೀಕಿ ಜಯಂತಿಯನ್ನು ಆಚರಣೆಗೆ ತಂದಿದ್ದು ಬಿಜೆಪಿ ಸರ್ಕಾರ, ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ, ಅದರೆ ಮತ ಪಡೆದಿದ್ದು ಮಾತ್ರ ಕಾಂಗ್ರೇಸ್, ಅದ್ದರಿಂದ ಎಸ್ಟಿ ಸಮಾಜವನ್ನು ಉನ್ನತ ಸ್ಥಾನಕ್ಕೆ ತಎಗೆದುಕೊಂಡು ಹೋಗಲು ಯಡಿಯೂರಪ್ಪನವರು, ಶ್ರೀರಾಮುಲು ಅವರ ಕೊಡುಗೆ ಅಪಾರ ಸಾಮಾನ್ಯ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿ ಪಕ್ಷ ಬಿಜೆಪಿ ಪಕ್ಷ ಅದ್ದರಿಂದ ಇಲ್ಲಿನ ಶಾಸಕ ಕೊಡುಗೆ ಶೂನ್ಯ, ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಶೌಚ್ಚಾಲಯ ಇಲ್ಲದಂತಹ ದುಸ್ಥಿತಿಯೇ 15 ವರ್ಷ ಅಳ್ವಿಕೆಗೆ ಕನ್ನಡಿ ಎಂದರು.
ಸಮಾರಂಭದಲ್ಲಿ ರಾಜ್ಯ ಎಸ್ಟಿ ಮೋರ್ಚಾ ಪ್ರದಾನ ಕಾರ್ಯದರ್ಶಿ ಮಂಜುನಾಥ ಓಲೇಕರ ಮಾತನಾಡಿ ವಾಲ್ಮೀಕಿ ಭವನ ಕಟ್ಟಡ ಬಿಜೆಪಿ ಸರ್ಕಾರ, ಬೊಮ್ಮಾಯಿ ಸರ್ಕಾರ , ಎಸ್ಟಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯವನ್ನು ನೀಡುವ ಮೂಲಕ ಇಡೀ ಜನಾಂಗದ ಅಭಿವೃದ್ದಿಗೆ ನಾಂದಿ ಹಾಡಿದ್ದು ಬಿಜೆಪಿ ಸರ್ಕಾರ, ನಮ್ಮ ವಾಲ್ಮೀಕಿಯ ಜಯಂತಿ, ರಾಮಮಂದಿರ ನಿರ್ಮಣ ಮಾಡುತ್ತಿರುವುದು ಬಿಜೆಪಿ ಸರ್ಕಾರ, ನಮ್ಮ ಅರಾಧ್ಯ ದೈವ ಅಂಜಿನೇಯ ಸ್ವಾಮಿಯ ಜನ್ಮ ಭೂಮಿ ಅಂಜನಾದ್ರಿಯ ಅಭಿವೃದ್ದಿ ಮಾಡುತ್ತಿರುವುದು ಬಿಜೆಪಿ ಸರ್ಕಾರ, ಕಾಂಗ್ರೇಸ್ ಸರ್ಕಾರಕ್ಕೆ ಏಕೆ ಇವು ಕಾಣಲಿಲ್ಲ, ನರೇಂದ್ರ ಮೋದಿಯವರು ವಿಶೇಷ ಅನುದಾನ, ಸಂವಿಧಾನಬದ್ದವಾಗಿ ಮೀಸಲಾತಿ ಹೆಚ್ಚಳದಂತಹ ಮಹತ್ತರ ಕಾರ್ಯಗಳನ್ನು ಮಾಡಿದ್ದಾರೆ.
ಓಬಳೇಶ್ ಪ್ರಸ್ತಾವಿಕವಾಗಿ ಮಾತನಾಡಿ ಬಿಜೆಪಿ ಸರ್ಕಾರ ಎಸ್ಟಿ ಸಮಾಜಕ್ಕೆ ಕೊಟ್ಟ ಕೊಡುಗೆಗೆಳನ್ನು ಪೂರ್ಣಪ್ರಮಾಣದಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಜಿ.ಟಿ. ಪಂಪಾಪತಿ ಮಾತನಾಡಿ 15 ವರ್ಷ ಅಡಳಿತ ನಡೆಸಿದ ಶಾಸಕ ಈ.ತುಕರಾಂ ಅವರು ಕೇವಲ ಒಂದಾಗಲಿ 100 ಕೋಟಿ ಯೋಜನೆ ಸಂಡೂರಿಗೆ ತಂದಿದ್ದಾರೆಯೇ ತೊರಿಸಿ, ಕೇವಲ ಕೆಲವೆ ದಿನಗಳಲ್ಲಿ 1300 ಕೋಟಿ ಯೋಜನೆ ಜಾರಿಗೆ ತರುವ ಮೂಲಕ ಸಂಡೂರು ಕ್ಷೇತ್ರಕ್ಕೆ ಅಭಿವೃದ್ದಿ ಮಾಡಿದ್ದಾರೆ, ನಿಜವಾದ ರಸ್ತೆ ನಿರ್ಮಾಣ ಮಾಡಿದ್ದು ಬಿಜೆಪಿ ಸರ್ಕಾರದ ಸಮಯದಲ್ಲಿ ಅದರೆ ಶಾಸಕರು ತಮ್ಮದು ಎಮದು ಹೇಳುತ್ತಿದ್ದಾರೆ ಎಂದರು.
ಜಿಲ್ಲಾ ಪ್ರಭಾರಿ ಸಿದ್ದೇಶ್ ಯಾದವ್ ಮಾತನಾಡಿ ಸ್ವಂತ ಅಸಕ್ತಿಗಾಗಿ, ತಮ್ಮ ಪ್ರಗತಿಗಾಗಿ ಕಾಂಗ್ರೇಸ್ ಅಡಳಿತ ನಡೆಸಿದೆ. ಕರ್ನಾಟಕದಲ್ಲಿ ಗ್ಯಾರಂಟಿಯಾಗಿ ಮಹಿಳೆಯರಿಗೆ 2000 ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ, ಅಗಾದರೆ ತಿಂಗಳಿಗೆ 40 ಸಾವಿರ ಕೋಟಿ ಎಲ್ಲಿಂದ ತರುತ್ತಾರೆ, ಹೇಳಲಿ, ರಾಜೀವ್ ಗಾಂಧಿ ಮನೆಯಿಂದಲೊ, ಪ್ರಿಯಾಂಕ ವಾರ್ದಾ ಮನೆಯಿಂದಲೋ, ಎಲ್ಲಿಂದ ಎಂದು ತಿಳಿಸಲಿ, ಸುಳ್ಳು ಗ್ಯಾರಂಟಿ ಕೊಡುವವರಿಂದ ದೇಶದ ಪ್ರಗತಿ ಸಾಧ್ಯವೇ , ಕೇವಲ ಜನರ ಮದ್ಯ ಭಿನ್ನತೆ ಸೃಷ್ಟಿ ಮಾಡಿ ಜಗಳ ಹಚ್ಚಿದ ಸರ್ಕಾರ ಇದ್ದರೆ ಅದು ಕಾಂಗ್ರೇಸ್ ಸರ್ಕಾರ ಎಂದರು.
ಕಾರ್ಯಕ್ರಮದಲ್ಲಿ ಎಲ್ಲಾ ಪುರಸಭೆಯ ಬಿಜೆಪಿ ಸದಸ್ಯರುಗಳು,ಮುಖಂಡರಾದ ಡಿ.ಕೃಷ್ಣಪ್ಪ, ಯರ್ರಿಸ್ವಾಮಿ ಕರಡಿ, ಎಲ್ಲಾ ಗಣ್ಯರನ್ನು ಕೆ.ಎಸ್. ದಿವಾಕರ್ ಸನ್ಮಾನಿಸಿದರು, ಅಜಯಮಂದಾಲ್, ಪುರುಷೋತ್ತಮ ಪ್ರಾರ್ಥಿಸಿದರು, ಪ್ರಶಾಂತ ನಿರೂಪಿಸಿದರು, ಪರಶುರಾಮ ವಕೀಲರು ಸ್ವಾಗತಿಸಿದರು.