ರಸ್ತೆಗಳು ನಮ್ಮ ದೇಶದ ಜೀವನಾಡಿಗಳು :ರಘುನಾಥ ಮಲ್ಕಾಪೂರೆ

ಬೀದರ,ಸೆ.1: ರಸ್ತೆಗಳು ನಮ್ಮ ದೇಶದ ಜೀವನಾಡಿಗಳು ಸರಕು ಸಾಗಣೆ ಒಂದು ಸ್ಥಳದಿಂದ ಇನ್ನೋಂದು ಸ್ಥಳಕ್ಕೆ ಸಾಗಿಸಲು ಸಾರಿಗೆ ವ್ಯವಸ್ಥೆ ಅತ್ಯಂತ ಪ್ರಮುಖವಾಗಿದೆ. ಅದಕ್ಕಾಗಿ ರಸ್ತೆಗಳನ್ನು ನಿರ್ಮಿಸಿದ ನಂತರ ಆಗಾಗ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಮಾಡಬೇಕಾಗುತ್ತದೆ. ಅಂತಹ ಕಾರ್ಯ ಇಂದು ಅಲಿಯಾಬಾದನಿಂದ ಜನವಾಡವರೆಗಿನ 4 ಕಿ.ಮೀ. ಅಂತರದ ಕಾಮಗಾರಿ 50 ಲಕ್ಷ ರೂ. ವೆಚ್ಚದಲ್ಲಿ ಸುಧಾರಣೆಯಾಗಲಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ರಘುನಾಥ ಮಲ್ಕಾಪೂರೆ ಅವರು ನುಡಿದರು.

ಅವರು ಅಲಿಯಾಬಾದ ಗ್ರಾಮದಲ್ಲಿ ರಸ್ತೆ ದುರಸ್ತಿ ಕಾಮಗಾರಿಯ ಮತ್ತು 12 ಲಕ್ಷ ರೂ. ವೆಚ್ಚದ ಎಸ್ಸಿ. ಸಮುದಾಯ ಭವನ ನಿರ್ಮಾಣದ ಶಂಕು ಸ್ಥಾಪನೆ ನೆರವೆರಿಸಿ ಸನ್ಮಾನಿತರಾಗಿ ಮಾತನಾಡುತಿದ್ದರು.ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅಶೋಕ ಪಾಟೀಲ ಅಲಿಯಾಬಾದ, ಶಿವರಾಜ ಕುದರೆ, ಸೂರಜಸಿಂಗ್ ಠಾಕೂರ, ಎ.ಪಿ.ಎಂ.ಸಿ. ಅಧ್ಯಕ್ಷ ವಿಜಯಕುಮಾರ ಆನಂದೆ, ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಅರವಿಂದ ಪಾಟೀಲ ಚಿಮಕೋಡ, ದೀಪಕ ಗಾದಗಿ, ಪೀರಪ್ಪಾ ಔರಾದೆ ಯರನಳ್ಳಿ ಸೇರಿದಂತೆ ಅನೇಕ ಇದ್ದರು.