ರಸ್ತೆಗಳು ನಮ್ಮ ಜೀವನಾಡಿಗಳು_ ಈ.ತುಕರಾಂ


ಸಂಜೆವಾಣಿ ವಾರ್ತೆ
ಸಂಡೂರು: ಜು: 18: ) ತಾಲೂಕಿನಾದ್ಯಂತ ರಸ್ತೆಗಳನ್ನು  ನಿರ್ಮಿಸಿದ್ದು ಇನ್ನೂ ಕೆಲ ರಸ್ತೆಗಳು ಪೂರ್ಣವಾಗಿಲ್ಲ, ಅವುಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು, ಅಲ್ಲದೆ ರಸ್ತೆಗಳು ನಮ್ಮ ಜೀವನಾಡಿಗಳಾಗಿ ಪ್ರಗತಿಗೆ ನಾಂದಿಯಾಗುತ್ತವೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ತಾಲೂಕಿನ ಕುರೇಕುಪ್ಪ, ದರೋಜಿ, ತೋರಣಗಲ್ಲು ಭಾಗದ ರಸ್ತೆಗಳ ನಿರ್ಮಾಣ ಕಾರ್ಯವನ್ನು ಖುದ್ದಾಗಿ ಪರಿಶೀಲನೆ ಮಾಡಿ ಮಾತನಾಡಿ ಈ ರಸ್ತೆ ಬಹು ಗುಣಮಟ್ಟ ಮತ್ತು ಶೀಘ್ರದಲ್ಲಿ ಮುಗಿಸಬೇಕು, ಕಾರಣ ದರೋಜಿ ಗ್ರಾಮದ ಜನತೆಗೆ ಅತಿ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದುರಸ್ತೆ ನಿರ್ಮಾಣದ ಮಾಹಿತಿ ನೀಡಿದರು.