ರಸ್ತೆಗಳಲ್ಲಿ ಹೆಚ್ಚಿದ ಬಿಡಾಡಿ ದನಗಳು: ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು

ಸಂಜೆವಾಣಿ ವಾರ್ತೆ
ನಂಜನಗೂಡು: ಡಿ.20:- ನಗರದ ಎಂಜಿಎಸ್ ರಸ್ತೆ ಆರ್ ಪಿ ರಸ್ತೆಗಳಲ್ಲಿ ಬಿಡಾಡಿ ದನಗಳು ರಸ್ತೆಗಳಲ್ಲಿ ಅಡ್ಡಲಾಗಿ ನಿಂತು ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದು ಹೆಚ್ಚಾಗಿದೆ ಇದಕ್ಕೆ ಕಡಿವಾಣ ಎಂದು ಪ್ರಶ್ನೆಯಾಗಿದೆ.
ಗೊತ್ತಿದ್ದರೂ ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು ಪ್ರತಿ ದಿನ ಆರ್ ಪಿ ರಸ್ತೆ ಮತ್ತು ಎಂಜಿಎಸ್ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚುತ್ತಿವೆ ಇದರ ಜೊತೆಗೆ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭಕ್ತಾದಿಗಳು ಹೋಗುವರು ಕೂಡ ಇದೇ ರಸ್ತೆಯಲ್ಲಿ ಹೋಗಬೇಕು.
ಬಿಡಾಡಿ ದನಗಳು ಕೂಡ ಹೆಚ್ಚಾಗಿದೆ ಯಾವುದೇ ಒಂದು ವಾಹನ ರಸ್ತೆಯಲ್ಲಿ ಹೋಗಬೇಕಾದರೆ ಜೀವ ಭಯದಿಂದ ವಾಹನಗಳನ್ನು ಚಲಿಸುವ ಪರಿಸ್ಥಿತಿ ಉಂಟಾಗಿದೆ ಈ ರಸ್ತೆಯಲ್ಲಿ ಓಡಾಡುವವರು ಕೂಡ ಸ್ಥಿತಿ ಹೇಳತಿರದು ರಸ್ತೆಯ ಮಧ್ಯದಲ್ಲೇ ನಿಂತು ತೊಂದರೆ ಉಂಟಾಗಿದೆ ಇವುಗಳ ಮಧ್ಯದಲ್ಲಿ ಸರ್ಕಸ್ ಮಾಡಿಕೊಂಡು ವಾಹನಗಳು ಚಲಿಸುವ ಪರಿಸ್ಥಿತಿ ಪ್ರತಿದಿನ ಇದೆ.
ಇದೇ ರಸ್ತೆಯಲ್ಲೇ ನಗರಸಭೆ ಅಧಿಕಾರಿಗಳು ಕೂಡ ಓಡಾಡುತ್ತಾರೆ ಆದರೂ ಕೂಡ ಯಾವುದೇ ಕ್ರಮ ತೆಗೆದುಕೊಳ್ಳದೆ ಇವರು ಕೂಡ ಸಾಹಸ ಮಾಡಿಕೊಂಡು ಓಡಾಡುತ್ತಾರೆ ಇಂತಹ ಸಮಯದಲ್ಲಿ ವಾಹನದ ಮೇಲೆ ಬೀಡಾಡಿ ದನಗಳು ಹೆರಿಗೆ ಬಿದ್ದರೆ ಪ್ರಾಣಕ್ಕೆ ಕುತ್ತು ಇದಕ್ಕೆ ಯಾರು ಹೊಣೆ ಎಂಬುದೇ ಪ್ರಶ್ನೆಯಾಗಿದೆ
ಹಲವಾರು ಬಡಾವಣೆಗಳಲ್ಲಿ ದನ ಕರುಗಳನ್ನು ಸಾಕಿರುವವರು ಬೆಳಿಗ್ಗೆ ಹಾಲನ್ನು ಕರೆದುಕೊಂಡು ರಸ್ತೆಗೆ ಬಿಟ್ಟು ಕೈ ತೊಳೆದು ಕೊಳ್ಳುತ್ತಿದ್ದಾರೆ ಇದರಿಂದ ಬಹಳ ತೊಂದರೆಯಾಗಿದೆ ತಕ್ಷಣ ಇವರಿಗೆ ನಗರಸಭೆಯಿಂದ ನೋಟಿಸ್ ನೀಡಿ ದಂಡ ವಿಧಿಸಿ ರಸ್ತೆಗೆ ಬಿಡದಂತೆ ಎಚ್ಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.