ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ

ಸುರಪುರ:ಸೆ.15- ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ದನಗಳ ಕಾಟ ಹೆಚ್ಚಾಗುತ್ತಿದ್ದು . ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಕೂಡಲೇ ಇವುಗಳ ಹಾವಳಿ ನಿಯಂತ್ರಿಸಲು ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಮಲ್ಲು ಹೊಸ್ಮನಿ ಸಂಜೆ ವಾಣಿ ಮೂಲಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಸಂಜೆಯಾಗುತ್ತಿದಂತೆ ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ , ಬಸ್ ನಿಲ್ದಾಣಗಳಲ್ಲಿ ಗುಂಪು ಗುಂಪಾಗಿ ಬೀಡಾಡಿ ದನಗಳು ಜಮಾಯಿಸುತ್ತಿದ್ದು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ನಗರದಲ್ಲಿ ಹಲವು ವರ್ಷಗಳಿಂದ ಬಿಡಾಡಿ ದನಗಳ ಹಾವಳಿ ಇದ್ದು ಇದರಿಂದ ಯಾವಾಗ ಮುಕ್ತಿ ಸಿಗುತ್ತದೆ ಎಂಬುದು ಜನರ ಪ್ರಶ್ನೆಯಾಗಿದೆ.
ಆಗಾಗ ಕೆಲವೊಂದು ಭಾರಿ ಬೀಡಾಡಿ ದನಗಳನ್ನು ಸಾಗಿಸುವ ಕಾರ್ಯಚರಣೆ ಅಧಿಕಾರಿಗಳು ಮಾಡಿದ್ದಾರೆ, ನಂತರ ಸುಮ್ಮನಾಗುತ್ತಾರೆ ಪರಿಣಾಮ ನಗರದಲ್ಲಿ ಅಲ್ಲಲ್ಲಿ ಬೀಡಾಡಿ ದನಗಳ, ಕರುಗಳ ಬಿಡಾರ ಕಂಡುಬರುತ್ತದೆ. ಆದ್ದರಿಂದ ಅಧಿಕಾರಿಗಳು ಬೀಡಾಡಿ ದನಗಳನ್ನ ಗೋ ಶಾಲೆಗೆ ಅಥವಾ ಸಂಬಂಧಪಟ್ಟವರಿಗೆ ಒಪ್ಪಿಸಬೇಕು ಇಲ್ಲದಿದ್ದರೆ ಅಪಘಾತದಂತ ಅನಾಹುತ ಸಂಭವಿಸಬಹುದು ಆದ್ದರಿಂದ ನಗರಸಭೆ ಅಧಿಕಾರಿಗಳು ದನಗಳನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.